ಶ್ವೇತಭವನದ ಮುಂದೆ ಭಾರೀ ಪ್ರತಿಭಟನೆ, ಬಂಕರ್‌ನಲ್ಲಿ ಬಚ್ಚಿಟ್ಟುಕೊಂಡ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.1-ಪೊಲೀಸರ ದೌರ್ಜನ್ಯದಿಂದ ಕಪ್ಪುವರ್ಣೀಯ ವ್ಯಕ್ತಿಜಾರ್ಜ್ ಪ್ರೋಯ್ಡ್ ಮೃತಪಟ್ಟ ನಂತರಅಮೆರಿಕದಲ್ಲಿ ಭುಗಿಲೆದ್ದಿರುಕಪ್ಪು ವರ್ಣೀಯರ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ಪಡೆದಿದ್ದು, ಸಾವು-ನೋವು ಮತ್ತು ಲೂಟಿ ಪ್ರಕರಣಗಳು ಮುಂದುವರಿದಿದೆ.

ಕಪ್ಪುಜನಾಂಗದ ವ್ಯಕ್ತಿಯೊಬ್ಬನಿಗೆ ಪೊಲೀಸರು ಹಿಂಸೆ ನೀಡಿಕೊಂದಿದ ನಂತರ ಅಮೆರಿಕ 25ಕ್ಕೂ ಹೆಚ್ಚು ನಗರಗಳು ಅಕ್ಷರಶಃ ರಣರಂಗವಾಗಿ ಹೊತ್ತಿ ಉರಿಯುತ್ತಿದೆ. ಇದರ ಬಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ತಟ್ಟಿದೆ.

ಕಫ್ರ್ಯೂ ಉಲ್ಲಂಘಿಸಿ ವಾಷಿಂಗ್ಟನ್‍ನಲ್ಲಿರುವ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಉದ್ರಿಕಕಪ್ಪು ವರ್ಣೀಯರನ್ನುಚದುರಿಸಲು ಪೋಲೀಸರು ಆಶ್ರುವಾಯು ಸಿಡಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಅನೇಕರಿಗ ಗಾಯಗಳಾಗಿವೆ.

ವೈಟ್‍ಹೌಸ್ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮುಂಜಾಗ್ರತಾಕ್ರಮವಾಗಿ ಟ್ರಂಪ್ ಅವರನ್ನು ಭದ್ರತಾ ಪಡೆಗಳು ಶ್ವೇತಭವನದಲ್ಲಿರುವ ರಹಸ್ಯ ಭೂಗತ ಅಡಗುದಾಣಕ್ಕೆ (ಅಂಡರ್‍ಗ್ರೌಂಡ್ ಬಂಕರ್) ಕೆಲಕಾಲ ಅಲ್ಲಿ ಇರಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ನ್ಯೂಯಾರ್ಕ್‍ಟೈಮ್ಸ್ ಪತ್ರಿಕೆಗಳು ವರದಿ ಮಾಡಿವೆ.

ಮುಂದುವರಿದ ಹತ್ಯೆ, ಲೂಟಿ ಕಪ್ಪು ವರ್ಣೀಯ ವ್ಯಕ್ತಿಜಾರ್ಜ್ ಪ್ರೋಯ್ಡ್ ಸಾವು ಖಂಡಿಸಿ ಅಮೆರಿಕದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮತ್ತಷ್ಟು ತೀವ್ರಗೊಂಡಿದ್ದು, ಲೂಟಿ, ಗಲಭೆ ಮತ್ತು ಹತ್ಯೆ ಘಟನೆಗಳು ಮುಂದುವರಿದಿವೆ.

ಅನೇಕ ನಗರಗಳಲ್ಲಿ ಕಫ್ರ್ಯೂ ವಿಧಿಸಲಾಗಿದ್ದರೂ, ಸಾವಿರಾರುಜನರು ಬೀದಿಗಿಳಿದು ದೊಡ್ಡ ಮಾಲ್‍ಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮೇಲೆ ದಾಳಿ ನಡೆಸಿ ಮನಸೋಇಚ್ಛೆ ಲೂಟಿ ಮಾಡುತ್ತಿದ್ದಾರೆ. ಇದನ್ನುತಡೆಯಲು ಬಂದರನ್ನು ನಿರ್ದಯವಾಗಿಕೊಲ್ಲುತ್ತಿದ್ದಾರೆ.  ಹಲವೆಡೆ ಪೊಲೀಸರು ಮತ್ತುಉದ್ರಿಕ್ತ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.  ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳು, ಕಾರುಗಳು ಮತ್ತು ಸಿಕ್ಕಸಿಕ್ಕ ವಸ್ತುಗಳಿಗೆ ಪ್ರತಿಭಟನೆಕಾರರು ಬೆಂಕಿ ಹಚ್ಚುತ್ತಿದ್ದಾರೆ.

ಕೊರೊನಾ ಹಾವಳಿಯಿಂದ ಈಗಾಗಲೇ ಅಪಾರ ಸಾವು-ನೋವಿಗೆ ಕಾರಣವಾಗಿರುವಅಮೆರಿಕದಲ್ಲಿ ಪ್ರತಿಭಟನೆಕಾರರು ಸಾಮಾಜಿಕಅಂತರ ಕಾಯ್ಡುಕೊಳ್ಳದೇ ಹಿಂಸೆಗೆ ಇಳಿಸಿದ್ದು, ಸೋಂಕು ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪು ಜನಾಂಗದ ಜಾರ್ಜ್ ಫ್ಲೈಯ್ಡ್‍ಎಂಬಾನನ್ನು ಬಂಧಿಸಿದ ಪೊಲೀಸ್‍ಅಧಿಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆಎಂಟು ನಿಮಿಷಗಳ ಕಾಲ ಅದುಮಿಟ್ಟಿಟ್ಟರು. ಉಸಿರುಗಟ್ಟಿ ಜಾರ್ಜ್ ಮೃತಪಟ್ಟ ನಂತರ ಮಿನ್ಸಿಸೋಟಾದಲ್ಲಿ ಆರಂಭವಾರ ಕಪ್ಪುಜನರ ಪ್ರತಿಭಟನೆ ಅಮೆರಿಕದ 25ಕ್ಕೂ ರಾಜ್ಯಗಳಲ್ಲಿ ವ್ಯಾಪಿಸಿ ಭಾರೀ ಹಿಂಸಾಚಾರ ಮತ್ತು ಸಂಘರ್ಷಕ್ಕೆಕಾರಣವಾಗಿದೆ.

ಕಪ್ಪುಜನರ ವಿವಿಧ ಸಂಘಟನೆಗಳು ಅನೇಕ ನಗರಗಳಲ್ಲಿ ಇಂದು ಪ್ರತಿಭಟನಾರ್ಯಾಲಿ ನಡೆಸಲಿದ್ದು, ಹಿಂಸಾಚಾರ ಮತ್ತಷ್ಟು ಭುಗಿಲೆಳುವ ಆತಂಕವಿದ್ದು, ಅಮೆರಿಕದ 50 ರಾಜ್ಯಗಳಲ್ಲಿ ತೀವ್ರಕಟ್ಟೆಚ್ಚರ ವಹಿಸಲಾಗಿದೆ.

Facebook Comments