ಟ್ರಂಪ್ ದಂಪತಿಗೂ ವಕ್ಕರಿಸಿದ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.2- ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮಿಲೇನಿಯಾ ಟ್ರಂಪ್ ಅವರಿಗೆ ಡೆಡ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ಕಾವು ಏರುತ್ತಿರುವ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷರಿಗೆ ಕೋವಿಡ್-19 ವೈರಸ್ ಹೆಮ್ಮಾರಿಯ ಕಾಟ ಶುರುವಾಗಿದೆ. ಇದರಿಂದಾಗಿ ಅವರ ಚುನಾವಣಾ ಪ್ರಚಾರ ಭಾಷಣಗಳಿಗೆ ಭಾರೀ ತೊಡಕಾಗಿದೆ.

ತಮಗೆ ಕೊರೊನಾ ಸೋಂಕು ದೃಢಪಟ್ಟಿರುವುದನ್ನು ಟ್ರಂಪ್ ಟ್ವೀಟರ್ ಮೂಲಕ ತಿಳಿಸಿದ್ದಾರೆ. ಫ್ಲೋಟಸ್ (ಮಿಲೇನಿಯಾ) ಮತ್ತು ನನಗೆ ಕೋವಿಡ್-19 ಸೋಂಕು ತಗುಲಿದೆ.

ನಾವಿಬ್ಬರೂ ತಕ್ಷಣದಿಂದಲೇ ಕ್ವಾರಂಟೈನ್‍ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನನ್ನ ಆರೋಗ್ಯದ ಬಗ್ಗೆ ನಾನು ಆಗಾಗ ನಿಮಗೆ ಮಾಹಿತಿ ಅಪ್‍ಡೇಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಟ್ರಂಪ್ ಪರಮಾಪ್ತ ಸೆನೆಟರ್ ಹೋಪ್ ಹಿಕ್ ಅವರಿಗೆ ಕೊರೊನಾ ಕಾಣಿಸಿಕೊಂಡ ಟ್ರಂಪ್ ದಂಪತಿಗಳಿಗೆ ಸೋಂಕು ತಗುಲಿದೆ.
ಅಧ್ಯಕ್ಷ ಟ್ರಂಪ್ ಅಮೆರಿಕದ 50 ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು.

ಆದರೆ ಕೋವಿಡ್ ಸೋಂಕಿನಿಂದಾಗಿ ಅವರು ಕೆಲ ದಿನಗಳ ಕಾಲ ಪ್ರತ್ಯೇಕ ವಾಸ ಮತ್ತು ಚಿಕಿತ್ಸೆ ಪಡೆಯಬೇಕಾಗಿರುವುದರಿಂದ ಅವರ ಚುನಾವಣಾ ಪ್ರಚಾರ ಭಾಷಣಗಳಿಗೆ ಅಡ್ಡಿಯಾಗಿದೆ.

Facebook Comments

Sri Raghav

Admin