ಸೂಪರ್ ಬೈಕ್‍ಗಳ ಮೇಲೆ ಶೇ.50ರಷ್ಟು ತೆರಿಗೆ ಕಡಿತ, ಭಾರತದ ಕ್ರಮಕ್ಕೆ ಟ್ರಂಪ್ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜೂ.11- ವಿಶ್ವ ವಿಖ್ಯಾತ ಡೇವಿಡ್ ಹ್ಯಾರ್ಲಿಸನ್ ಸೇರಿದಂತೆ ಅಮೆರಿಕದ ಸೂಪರ್ ಬೈಕ್‍ಗಳ ಮೇಲೆ ಈ ಹಿಂದೆ ವಿಧಿಸಲಾಗಿದ್ದ ಶೇ.100ರಷ್ಟು ತೆರಿಗೆಯನ್ನು ಭಾರತ ಈಗ ಶೇ.50ರಷ್ಟು ಇಳಿಸಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸಮಾಧಾನ ತಂದಿಲ್ಲ.

ಈ ಕುರಿತು ವಾಷಿಂಗ್ಟನ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್ ತೆರಿಗೆಗಳ ರಾಜ ಭಾರತ ತಮ್ಮ ದೇಶದ ಉತ್ಪನ್ನಗಳಿಗೆ ಭಾರೀ ರಿಯಾಯಿತಿ ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ಶೇ.50ರಷ್ಟು ತೆರಿಗೆ ಕಡಿತಗೊಳಿಸಿದೆ. ಇದು ಸ್ವೀಕಾರಾರ್ಹ ಅಲ್ಲ. ಇದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ಭಾರತದ ತೆರಿಗೆ ಏರಿಕೆ ವಿರುದ್ಧ ಅಮೆರಿಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಭಾರತಕ್ಕೆ ಈ ಹಿಂದೆ ನೀಡಲಾಗಿದ್ದ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಜೂ.5ರಿಂದ ರದ್ದುಗೊಳಿಸಿ ಅಮೆರಿಕ ಆದೇಶ ನೀಡಿದೆ.

ಇದರಿಂದ ಭಾರತ ಅಮೆರಿಕಕ್ಕೆ ರಫ್ತು ಮಾಡುವ ಸಾವಿರಾರು ಉತ್ಪನ್ನಗಳಿಗೆ ತೆರಿಗೆ ಪಾವತಿಸುವಂತಾಗಿದೆ. ಟ್ರಂಪ್ ಒತ್ತಡಕ್ಕೆ ಮಣಿದು ಸೂಪರ್ ಬೈಕ್ ಸೇರಿದಂತೆ ಕೆಲವು ವಸ್ತುಗಳ ಮೇಲೆ ಅಮೆರಿಕ ತೆರಿಗೆ ಕಡಿತ ಮಾಡಿದ್ದರೂ ಅದು ಟ್ರಂಪ್‍ಗೆ ತೃಪ್ತಿ ನೀಡಿಲ್ಲ.

Facebook Comments