ಬಿಟ್ಟಿ ಸಲಹೆ ಕೊಡ್ತಾರೆ ಅಂತ ಹೆಚ್ಚು ನೀರು ಕುಡಿದರೆ ಕೆಡುತ್ತೆ ಆರೋಗ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

DrinkingWater--01

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ತಿನ್ನುವ ಆಹಾರ, ಕುಡಿಯು ನೀರು, ಸೇವಿಸುವ ಗಾಳಿ, ಮಾಡುವ ವ್ಯಾಯಾಮ ಮುಂತಾದ ಆರೋಗ್ಯ ರಕ್ಷಣೆಯ ಸಾಧನಗಳ ಬಗ್ಗೆ ವೈದ್ಯರ, ತಜ್ಞರ, ಸಲಹೆ ಪಡೆಯುವ ಸಮಾಲೋಚನೆ ನಡೆಸುವ ಪರಿಪಾಠ ಬೆಳೆಸಿಕೊಳ್ಳುತ್ತಿರುವುದು ಸಂತಸದ ಸಂಗತಿ.

ಆದರೆ ಅನೇಕರು ಪತ್ರಿಕೆ, ಟಿವಿ, ರೇಡಿಯೋ ಮುಂತಾದ ಮಾಧ್ಯಮಗಳಲ್ಲಿ ಬರುವ ಎಲ್ಲಾ ರೀತಿಯ ಆರೋಗ್ಯ ಪ್ರಚಾರ ಸಲಹೆಗಳಲ್ಲಿ ಆಸಕ್ತಿ ವಹಿಸಿ, ಅವುಗಳನ್ನು ತಮ್ಮ ನಿತ್ಯ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಹಾಗೆಯೇ ಸ್ನೇಹಿತರು, ಬಂಧುಗಳು ಹಿತಚಿಂತಕರು, ಅವರವರ ದೃಷ್ಟಿಕೋನಗಳಿಂದ ನೀಡುವ ಕೆಲವು ಸಲಹೆಗಳನ್ನು ಯಥಾವತ್ತಾಗಿ ಪಾಲಿಸತೊಡಗಿದ್ದಾರೆ. ಹೀಗೆ ಬರುವ ಈ ಎಲ್ಲಾ ಸಲಹೆಗಳು, ಆರೋಗ್ಯ ರಕ್ಷಣೆಗೆ ಎಷ್ಟು ಸಹಾಯವಾಗುತ್ತದವೆ ಎನ್ನುವುದರ ಬಗ್ಗೆ ಆಳವಾಗಿ ಚಿಂತಿಸಿ ನೋಡಿದಾಗ ಇವುಗಳಲ್ಲಿ ಸಾಕಷ್ಟು ಸಲಹೆಗಳು ಆರೋಗ್ಯರಕ್ಷಣೆಗೆ ಸಾಧಕವಾಗುವ ಬದಲು ಬಾಧಕವಾಗಿರುತ್ತವೆ. ಉದಾಹರಣೆಗೆ ಕುಡಿಯುವ ನೀರಿನ ಪ್ರಮಾಣದ ಬಗ್ಗೆ ನೋಡೋಣ.

ಸಕಲ ಜೀವಿಗಳ ಜೀವದ ಆಧಾರ ಗಾಳಿ, ನೀರು, ಆಹಾರ, ಜೀವರಕ್ಷಣೆಗೆ ಗಾಳಿಯನ್ನು ಬಿಟ್ಟರೆ ನೀರಿಗೆ ಅಗ್ರಸ್ಥಾನ. ಮಾನವನ ದೇಹ ಸಹ 3/4 ಭಾಗ ನೀರಿನ ಅಂಶದಿಂದ ಕೂಡಿದೆ. ಆರೋಗ್ಯ ರಕ್ಷಣೆಯಲ್ಲಿಯೂ ಸಹ ನೀರಿನ ಬಹುಮುಖ್ಯ ಪಾತ್ರ. ಹೀಗೆ ಪ್ರಾಣಾಧಾರವಾದ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಬಹುಮಮುಖ್ಯ ಪಾತ್ರವನ್ನು ವಹಿಸುವ ನೀರಿನ ಸೇವನೆಯ ಪ್ರಮಾಣದ ಬಗ್ಗೆ ಒಂದು ನಿರ್ದಿಷ್ಟವಾದ ವೈಜ್ಞಾನಿಕ ಅಭಿಪ್ರಾಯವಿಲ್ಲ.  ಇಂದಿನ ಬಹುಪಾಲು ಜನರಲ್ಲಿ ಅಧಿಕ ಪ್ರಮಾಣದಲ್ಲಿ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಿತ ಎಂಬ ಅಭಿಪ್ರಾಯವಿದೆ. ಹಾಗೆಯೇ ಇದನ್ನು ರೂಢಿಯಲ್ಲಿ ಸಹ ತಂದಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ ಕೆಲವು ವೈದ್ಯರೂ ಸಹ ಪ್ರತಿನಿತ್ಯ ಹೆಚ್ಚು ಪ್ರಮಾಣದಲ್ಲಿ ನೀರನ್ನು ಕುಡಿಯಲು ಸಲಹೆ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ತಜ್ಞರೊಬ್ಬರು ಪತ್ರಿಕೆಯೊಂದರಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 5ರಿಂದ 8 ಲೀಟರ್ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಿತ ಎಂಬ ಸಲಹೆ ನೀಡಿ ಅಧಿಕ ಪ್ರಮಾಣದಲ್ಲಿ ನೀರನ್ನು ಕುಡಿಯಲು ಪ್ರದೋದಿಸಿದ್ದಾರೆ.

Water-01

ಇಂತಹ ಅಭಿಪ್ರಾಯಗಳು, ಸಲಹೆಗಳು ಆರೋಗ್ಯ ದೃಷ್ಟಿಯಿಂದ ಎಷ್ಟು ಸಮಂಜಸ ? ದೇಹರಕ್ಷಣೆ ಆಧಾರವಾಗಿರುವ ನೀರು, ಆರೋಗ್ಯ ಪಾಲನೆಯಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತದೆ ಎನ್ನುವುದು ನಿಜ. ಆದರೆ ನೀರನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂಬ ವಾದಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ.  ನೀರಿನ ಸೇವನೆ ಎಲ್ಲರಿಗೂ ಅತ್ಯವಶ್ಯಕ. ಆದರೆ ಸೇವಿಸಬೇಕಾದ ನೀರಿನ ಪ್ರಮಾಣ ಎಲ್ಲಾ ವ್ಯಕ್ತಿಯಲ್ಲಿ ಒಂದೇ ಆಗಿರುವುದಿಲ್ಲ. ಪ್ರತಿವ್ಯಕ್ತಿಯ ದೇಹದ ನೀರಿನ ಅವಶ್ಯಕತೆ ಆ ವ್ಯಕ್ತಿಯಲ್ಲಿ ಒಂದೇಆಗಿರುವುದಿಲ್ಲ. ಪ್ರತಿವ್ಯಕ್ತಿಯ ದೇಹದ ನೀರಿನ ಅವಶ್ಯಕತೆ ಅವ್ಯಕತಿಯ ದೇಹಪ್ರಕೃತಿ, ವಾಸ ಮಾಡುವ ದೇಶ,ಮಾಡುವ ಕೆಲಸ, ತಿನ್ನುವ ಆಹಾರ, ಬದಲಾಗುತ್ತಿರುವ ಕಾಲ (ಋತು) ಮುಂತಾದವುಗಳನ್ನು ಅವಲಂಬಿಸಿ ನೀರು ಸೇವನೆಯ ಪ್ರಮಾಣ ವ್ಯತ್ಯಾಸವಾಗುತ್ತದೆ.

ಕಫ ಪ್ರಕೃತಿಯ ದೇಹದವಿಗೆ ನೀರಿನ ನೀಡಿಕೆ. ಆದರೆ ಅದೇ ಪಿತ್ತ ಪ್ರಕೃತಿಯವರಲ್ಲಿ ಹೆಚ್ಚಿನ ಪ್ರಮಾಣ ನೀರಿನ ಅವಶ್ಯಕತೆ ಇರುತ್ತದೆ. ಉಷ್ಣ ದೇಶದಲ್ಲಿ ವಾಸ ಮಾಡುವವರಲ್ಲಿ ಹೆಚ್ಚು ಶೀತ ದೇಶದಲ್ಲಿ ವಾಸ ಮಾಡುವ ಜನರಲ್ಲಿ ದೇಹದ ನೀರಿನ ಬೇಡಿಕೆ ಕಡಿಮೆ. ರೂಷ ಎಂದರೆ ಒಣಗಿದ ಪದಾರ್ಥಗಳನ್ನು ತಿಂದಾಗ ಬೇಕಾಗುವ ನೀರಿನ ಪ್ರಮಾಣ ದ್ರವ ಪದಾರ್ಥಗಳನ್ನು ತಿಮದಾಗ ಅಧಿಕವಾಗಿರುತ್ತದೆ. ಶೀತಕಾಲದಲ್ಲಿ ನೀರಿನ ಸೇನೆ ಪ್ರಮಾಣ ಕಡಿಮೆ, ಅದೇ ಬೇಸಿಗೆ ಕಾಲದಲ್ಲಿ ಅದರ ಪ್ರಮಾಣ ಅಧಿಕ. ಈ ರೀತಿಯಾಗಿ ದೇಶ, ಕಾಲ, ಪ್ರಕೃತಿ ಮುಂತಾದವುಗಳನ್ನು ಅನುಸರಿಸಿ ನೀರಿನ ಸೇವನೆ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ.

ಆದರೆ ಎಲ್ಲರೂ ದಿನದಲ್ಲಿ ಐದು ಲೀಟರ್ ನೀರು ಕುಡಿಯಿರಿ, ಎಂಟು ಲೀಟರ್ ನೀರು ನೀರು ಕುಡಿಯಿರಿ, ಎಂಟು ಲೀಟರ್ ನೀರು ಕುಡಿಯಿರಿ, ಅಧಿಕ ಪ್ರಮಾಣಲ್ಲಿ ನೀರು ಕುಡಿಯಿರಿ, ಇದು ದೇಹಕ್ಕೆ ಹಿತ, ಆರೋಗ್ಯ ಸುಧಾರಿಸುತ್ತದೆ ಎಂಬ ಸಲಹೆಗಳು ವಾಸ್ತವಕ್ಕೆ ದೂರ. ದೇಹಕ್ಕೆ ನೀರಿನ ಅವಶ್ಯಕತೆ ಬಿದ್ದಾಗ, ನೈಸರ್ಗಿಕ ಪ್ರಕ್ರಿಯೆಯಾದ ಬಾಯಾರಿಕೆಯ ಮೂಳಕ ವ್ಯಕ್ತಪಡಿಸುತ್ತದೆ. ಆಗ ಬಾಯಾರಿಕೆ ಇಂಗುವಷ್ಟು ಪ್ರಮಾಣ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಿತ. ಅದನ್ನು ಬಿಟ್ಟು ಅನಾವ್ಯಕವಾಗಿ ದಿನದಲ್ಲಿ ಅನೇಕ ಬಾರಿ ಅಧಿಕ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿದ್ದರೆ ಇದರಿಂದ ಆರೋಗ್ಯ ಸುಧಾರಣೆಗಿಂತ ಆರೋಗ್ಯ ಕೆಡಲು ದಾರಿಯಾಗುತ್ತದೆ. ಬಾಯಾರಿಕೆ ಇಲ್ಲದಾಗ ಅನಾವಶ್ಯಕವಾಗಿ ನೀರನ್ನು ಕುಡಿಯುವುದರಿಂದ ಜೀರ್ಣರಸವು ದುರ್ಬಲಗೊಂಡು ಅಗ್ನಿಮಾಂದ್ಯ- ಅಜೀರ್ಣಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಬಹುಮೊತ್ತ ಶೋಥ, ಸ್ಥೌಲ್ಯ ಮುಂತಾದ ಅನೇಕ ರೋಗಗಳು ಉಂಟಾಗುತ್ತವೆ. ಆದುದರಿಂದ ನೀರನ್ನು ಯಾವಾಗಲೂ ದೇಹಕ್ಕೆ ಅವಶ್ಯಕತೆ ಇರುವಷ್ಟು ಬಾಯಾರಿಕೆಯಾದಾಗ ಮಾತ್ರ ಸೇವಿಸುವುದು ಉತ್ತಮ.

Water-02

ಹಲವರು ಬೆಳಿಗ್ಗೆ ಎದ್ದ ಕೂಡಲೇ 2-3 ಲೋಟ ನೀರನ್ನು ಕುಡಿಯುವ ವಾಡಿಕೆಯನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಮಲಪ್ರವೃತ್ತಿ ಸರಿಯಾಗಿ ಆಗುತ್ತದೆ. ಹೊಟ್ಟೆ ಮತ್ತು ಕರುಳುಶುದ್ಧಿಯಾಗುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಇದು ಒಂದು ತಪ್ಪು ಭಾವನೆ.  ರಾತ್ರಿ ತಿಂದ ಆಹಾರ ಬೆಳಗ್ಗಿನ ಹೊತ್ತಿಗೆ ಸಂಪೂರ್ಣವಾಗಿ ಜೀರ್ಣವಾಗಿ ಹೊಟ್ಟೆ ಖಾಲಿಯಾಗಿರುತ್ತದೆ ಹಸಿವು ಉಂಟಾಗುತ್ತದೆ ಆಗ ಹೊಟ್ಟೆಯಲ್ಲಿ ಜೀರ್ಣರಸವು ಸಹಜ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಬೆಳಿಗ್ಗೆ ತಿಂದ ಆಹಾರವನ್ನು ಜೀರ್ಣಿಸಲು ಅಣಿಯಾಗಿರುತ್ತದೆ. ಆದರೆ ಎದ್ದ ಕೂಡಲೇ ನೀರನ್ನು ಕುಡಿದಾಗ ಹೊಟ್ಟೆಯಲ್ಲಿನ ಜೀರ್ಣರಸ ದುರ್ಬಲಗೊಂಡು, ಸೇವಿಸಿದ ಆಹಾರನ್ನು ಸಂಪೂರ್ಣಜೀರ್ಣಿಸಲು ಅಶಕ್ತವಾಗಿ ಅಗ್ನಿಮಾಂದ್ಯ ಉಂಟಾಗುತ್ತದೆ. ಇದಲ್ಲದೆ ಅನಾವಶ್ಯಕವಾಗಿ ಕುಡಿದ ಅಧಿಕಪ್ರಮಾಣದ ನೀರಿನಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ಮೂತ್ರಪಿಂಡಗಳ ಕಾರ್ಯ ನಿರ್ವಹಣೆ ಹೆಚ್ಚಿ ಮೂತ್ರಪಿಂಡಗಳ ಮೇಲೆ ಅಧಿಕ ಒತ್ತಡ ಬೀಳುತ್ತದೆ.
ಅವಶ್ಯಕತೆ ಇಲ್ಲದೆ ಅಧಿಕ ಪ್ರಮಾಣದಲ್ಲಿನೀರನ್ನು ಸೇವಿಸುವುದರಿಂದ ಶರೀರದಲ್ಲಿ ಜಲಾಂಶ ಪ್ರಮಾಣ ಹೆಚ್ಚಾಗಿ ದೇಹದಲ್ಲಿನ ಜೈವಿಕ ಚಟುವಟಿಕೆಗಳಲ್ಲಿ ಏರುಪೇರಾಗುವ ಸಂಭವವಿರುತ್ತದೆ. ಆದುದರಿಂದ ಬೆಳಿಗ್ಗೆ ಎದ್ದ ಕೂಡಲೇ ಬಾಯಾರಿಕೆ ಇಲ್ಲದೆ ಅನಾವಶ್ಯಕವಾಗಿ ನೀರನ್ನು ಕುಡಿಯುವುದು ಆರೋಗ್ಯಕಕರ ಅಭ್ಯಾಸವಲ್ಲ.

ನಮ್ಮ ಪ್ರಾಚೀನ ಆಯುರ್ವೇದ ವೈದ್ಯ ಗ್ರಂಥಗಳಲ್ಲಿ ಆರೋಗ್ಯ ರಕ್ಷಣೆಗೆ ಒಬ್ಬ ವ್ಯಕ್ತಿ ತಾನು ಸೇವಿಸಬೇಕಾದ ನೀರಿನ ಪ್ರಮಾಣದ ಬಗ್ಗೆ ವೈಜ್ಞಾನಿಕ ವಿವರಣೆ ಇದೆ.
ನೀರನ್ನು ಯಾವಾಗಲೂ ಹಿತವಾಗಿ, ಮಿತವಾಗಿ ಹಾಗೂ ತೃಷ್ಣ ಅಂದರೆ ಬಾಯಾರಿಕೆ ಉಂಟಾದಾಗ ಮಾತ್ರ ಸೇವಿಸುವುದು ಒಳ್ಳೆಯದು. ಆರೋಗ್ಯವಂತ ವ್ಯಕ್ತಿ ತನ್ನ ಆರೋಗ್ಯವನ್ನು ಸದಾ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಆಹಾರ ಮತ್ತು ನೀರಿನ ಸೇವನೆ ಕ್ರಮವನ್ನು ಆಯುರ್ವೇದ ಬಹಳ ಸ್ವಾರಸ್ಯಕರವಾಗಿ ಹೇಳಿದೆ.
ಊಟದಲ್ಲಿ ಹೊಟ್ಟೆಯ ಅರ್ಧಭಾಗ ತುಂಬುವಷ್ಟು ಅನ್ನ ಮುಂತಾದ ಘನ ಪದಾರ್ಥಗಳಿರಬೇಕು. ಕಾಉಭಾಗದಷ್ಟು ನೀರನ್ನು ಸೇವಿಸಬೇಕು, ಉಳಿದ ಕಾಲುಭಾಗವನ್ನು ಗಾಳಿ ಆಡಲು ಬಿಡಬೇಕು. ಇದರಿಂದ ಸಹಜವಾಗಿ ಜೀರ್ಣವಾಗುತ್ತದೆ ಎಂಬುದು ಆಯುರ್ವೇದ ವೈದ್ಯರ ಅಭಿಪ್ರಾಯ. ಅಂದರೆ ನೀರಿನ ಪ್ರಮಾಣ ತೆಗೆದುಕೊಳ್ಳುವ ಆಹಾರದ ಅರ್ಧಪಾಲಿನಷ್ಟಿರಬೇಕು. ಅದು ಒಬ್ಬ ವ್ಯಕ್ತಿಗೆ ಸಾಧಾರಣವಾಗಿ ಒಂದು ದಿನದಲ್ಲಿ ಬೇಕಾಗುವ ನೀರಿನ ಪ್ರಮಾಣ ಇದರ ಜೊತೆಗೆ ವ್ಯಕ್ತಿಯ ದೇಹ ಪ್ರಕೃತಿ ದೇಶ, ದೇಹಶ್ರಮ ಮುಂತಾದವುಗಳನ್ನು ಅವಲಂಬಿಸಿ ದೇಹಕ್ಕೆ ನೀರಿನ ಅವಶ್ಯಕತೆ ಬಿದ್ದಾಗ ಅದು ತನ್ನ ಸಹಜ ಪ್ರವೃತ್ತಿಯಾದ ಬಾಯಾರಿಕೆಯ ಮೂಲಕ ವ್ಯಕ್ತಪಡಿಸುತ್ತದೆ. ಆಗ ಮಾತ್ರ ಬಾಯಾರಿಕೆ ಇಂಗುವಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಹಿತ. ಈ ನಿಯಮವನ್ನು ಮರೆತು `ಅಧಿಕ ನೀರನ್ನು ಸೇವಿಸುವುದು ಆರೋಗ್ಯ ಸುಧಾರಿಸುತ್ತದೆ’ ಎಂಬ ಸತ್ಯಾಂಶಕ್ಕೆ ದೂರವಾದ ಸಲಹೆಯನ್ನು ನಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿದರೆ ಆರೋಗ್ಯ ಸುಧಾರಿಸುವುದಕ್ಕೆ ಬದಲಾಗಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ.

Facebook Comments

Sri Raghav

Admin