ವೋಟ್ ಹಾಕೋದು ಬಿಟ್ಟು ಮೋಜು ಮಸ್ತಿಗೆ ಬಂದರೆ ಊಟ-ನೀರು ಕೊಡಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾರವಾರ, ಮಾ.27-ಲೋಕಸಭಾ ಚುನಾ ವಣೆ ಮತದಾನ ಪ್ರಮಾಣ ಹೆಚ್ಚಳ ಮಾಡಲು ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸಲು ನಾನಾ ರೀತಿಯ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ಆದರೆ ನಮ್ಮ ಬುದ್ಧಿವಂತ ಮತದಾರರು ರಜಾ ಸಿಕ್ತಲ್ಲ ಅಂತ ಮಜಾ ಮಾಡಲು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ.

ಇಂಥವರಿಗಾಗಿಯೇ ಗೋಕರ್ಣದ ಹೊಟೇಲ್ ಮಾಲೀಕರೊಬ್ಬರು ಮತದಾನ ಮಾಡದ ಹೊರತು ಊಟ ದೊರೆಯಲ್ಲ ಎಂದು ನಾಮಫಲಕವನ್ನು ಹೊಟೇಲ್ ಮುಂಭಾಗ ಹಾಕಿ ಜಾಗೃತಿ ಮೂಡಿಸುತ್ತಿದ್ದಾರೆ.ಮತದಾನದ ದಿನ ನೀಡುವ ರಜೆಯನ್ನು ವರದಾನವಾಗಿ ಮಾಡಿಕೊಳ್ಳುವ ಕೆಲವರು ಪ್ರಸಿದ್ಧ ತಾಣವಾದ ಗೋಕರ್ಣ ದೇವಾಲಯ, ಬೀಚ್‍ಗಳಿಗೆ ಭೇಟಿ ನೀಡಿ ಮೋಜು ಮಸ್ತಿ ಮಾಡುತ್ತಾರೆ.

ಹೀಗಾಗಿ ಮತದಾನದ ದಿನದಂದು ಗೋಕರ್ಣಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಈ ಬಾರಿಯ ಲೋಕಸಭೆ ಚುನಾವಣೆ ಏ.18 ಹಾಗೂ 23 ರಂದು ಎರಡು ಹಂತದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ರಜೆಯನ್ನೂ ಸಹ ನೀಡಲಾಗುತ್ತದೆ. ಅಂದು ಗೋಕರ್ಣಕ್ಕೆ ಪ್ರವಾಸಿಗರು ಬರುತ್ತಾರೆ . ಇದನ್ನು ಮನಗಂಡ ಪೈ ರೆಸ್ಟೋರೆಂಟ್‍ನ ಮಾಲೀಕರೊಬ್ಬರು ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಮಾಡದೆ ಬರುವವರ ಪ್ರವಾಸಿಗರಿಗೆ ಊಟ, ಉಪಹಾರ ನೀಡಲಾಗುವುದಿಲ್ಲ ಎಂಬ ನಾಮಫಲಕ ಅಳವಡಿಸಿದ್ದಾರೆ.

ಅಂದು ತಮ್ಮ ತಮ್ಮ ಊರುಗಳಲ್ಲೇ ಇದ್ದು, ಮತಗಟ್ಟೆಗಳಲ್ಲಿ ತಪ್ಪದೆ ಮತದಾನ ಮಾಡಬೇಕೆಂದು ಮನವಿ ಮಾಡಿದ್ದಾರೆ.  ಮತದಾನಕ್ಕಾಗಿ ಚುನಾವಣಾ ಆಯೋಗ, ಸರ್ಕಾರ ಹಲವಾರು ಕಾರ್ಯಕ್ರಮ, ಹಣವನ್ನು ಸಹ ಖರ್ಚು ಮಾಡುತ್ತಿರುವಾಗ ಮತದಾನ ಮಾಡುವುದು ನಮ್ಮ ಜವಾಬ್ದಾರಿಯಲ್ಲವೇ? ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ