ಖಾಸಗಿ ಆಸ್ಪತ್ರೆಗಳ ದರವೇ ಖಾಸಗಿ ಮೆಡಿಕಲ್ ಕಾಲೇಜುಗಳಿಗೂ ಅನ್ವಯ : ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ‌.30- ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಮಾಡಿದ್ದ ದರವೇ ಖಾಸಗಿ ಮೆಡಿಕಲ್ ಕಾಲೇಜುಗಳಿಗೂ ಅನ್ವಯ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದರು.

ಕ್ವಾರಂಟೈನ್ ಮುಗಿಸಿ ವಿಧಾನಸೌಧಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಇದ್ದ ಲ್ಯಾಬ್ ಗಳನ್ನು 80 ಮಾಡಿದ್ದೇವೆ.‌11 ಖಾಸಗಿ ಮೆಡಿಕಲ್ ಕಾಲೇಜುಗಳಿಂದ 4500 ಹಾಸಿಗೆಗಳು ಸಿಗಲಿವೆ. ಹಂತ ಹಂತವಾಗಿ 4500 ಬೆಡ್ ಗಳು ಸಿಗಲಿವೆ ಎಂದರು.

ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕನಾಗಿ ಹಾಸಿಗೆಗಳ ಅಗತ್ಯವಿದೆ. ಮೂರು ಸರ್ಕಾರಿ ಮೆಡಿಕಲ್ ಕಾಲೇಜುಗಳಿಂದ 1000 ಹಾಸಿಗೆಗಳನ್ನು ಕೊರೋನಾಗಾಗಿ ಮೀಸಲಿರಿಸಲಾಗಿದೆ ಎಂದರು.

ಬೆಂಗಳೂರಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಯಾರು ಆತಂಕ ಪಡಬೇಡಿ. ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಪಾಸಿಟಿವ್ ಕೇಸ್ ಗಳು ಹೆಚ್ಚಳ ವಾಗುತ್ತಿವೆ.‌ ನಾನು ಈ ಮೊದಲೇ ಹೇಳಿದ್ದೆ. ಜುಲೈ ನಲ್ಲಿ ಪಾಸಿಟಿವ್ ಹೆಚ್ಚಳ ಆಗಲಿದೆ ಆತಂಕ ಪಡಬೇಡಿ ಎಂದು ಹೇಳಿದ್ದಾಗಿ ತಿಳಿಸಿದರು.

ನನ್ನ ಪತ್ನಿ, ಪುತ್ರಿಗೆ ಕೊರೋನಾ ಪಾಸಿಟಿವ್ ನಿಂದ ನಾನು ಕ್ವಾರಂಟೇನ್ ನಲ್ಲಿದ್ದೆ. ಎರಡು ಬಾರಿಯ ಟೆಸ್ಟಿಂಗ್ ನಲ್ಲಿ ನನ್ನ ರಿಪೋರ್ಟ್ ನೆಗಟೀವ್ ಬಂತು. ಈಗ ಕ್ವಾರಂಟೇನ್ ಮುಗಿಸಿ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ.

ಕ್ವಾರಂಟೈನ್ ನಲ್ಲಿದ್ರೂ ನಿತ್ಯ ಕೋವಿಡ್ ಕೆಲಸದಲ್ಲಿ ಮನೆಯಿಂದಲೇ ಭಾಗವಹಿಸ್ತಿದ್ದೆ. ಭೌತಿಕವಾಗಿ ಇವತ್ತಿಂದ ಹೊರಗೆ ಬದಿದ್ದೇನೆ. ನಾನು ಆಕ್ಟಿವ್ ಆಗಿದ್ರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗುತ್ತಿತ್ತು. ಮತ್ತೆ ಜನರ ಸೇವೆ ಮಾಡುವ ಅವಕಾಶ ಬಂದಿದ್ದು ಸಂತಸ ತಂದಿದೆ.

ಎಲ್ಲರ ಹಾರೈಕೆಯಿಂದ ಮತ್ತೆ ಎಲ್ಲರ ಸೇವೆಗೆ ಅವಕಾಶ ಸಿಕ್ಕಿದೆ. ಮತ್ತೆ ಎಂದಿನಂತೆ ಬದ್ದತೆ ಯಿಂದ ಕೆಲಸ ಮಾಡ್ತೇನೆ. ನನ್ನ ಕುಟುಂಬದಲ್ಲಿ ಯಾರಿಗೆಲ್ಲ ಪಾಸಿಟಿವ್ ಬಂದಿತ್ತೋ‌ ಅವರೂ ಗುಣಮುಖರಾಗಿದ್ದಾರೆ, ಇನ್ನೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ ಎಂದು ಹೇಳಿದರು. ನಮ್ಮ ಕುಟುಂಬ ಸದಸ್ಯರು ಗುಣ ಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು.

Facebook Comments

Sri Raghav

Admin