ರೋಬೊಟಿಕ್ ಸಹಾಯದ ಯುವ ವೈದ್ಯನ ಸಾಧನೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು04: ಸ್ಪೆಷಲಿಸ್ಟ್ ಹಾಸ್ಪಿಟಲ್‌ನ ಡಾ. ಆರ್. ಪ್ರಶಾಂತ್ ಅವರು ರೋಬೊಟಿಕ್ ಸಹಾಯದ ಸಾವಿರ ಆರ್ಥೊಪೆಡಿಕ್ ಶಸ್ತ್ರ ಚಿಕಿತ್ಸೆಗಳನ್ನು ಪೂರೈಸಿದ ಕರ್ನಾಟಕದ ಪ್ರಥಮ ವೈದ್ಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಶೇ.100ರಷ್ಟುಯಶಸ್ಸಿನ 30 ತಿಂಗಳ ಕಡಿಮೆ ಅವಧಿಯೊಳಗೆ ಈ ಮೈಲುಗಲ್ಲನ್ನು ತಲುಪಿದ ಅತ್ಯಂತ ಕಿರಿಯ ರೋಬೊಟಿಕ್ ಸರ್ಜನ್ ಆಗಿರುವ ಡಾ.ಪ್ರಶಾಂತ್ .

ಸೊಂಟದ ಮತ್ತು ಮಂಡಿಯ ಬದಲಿ ಕೀಲು ಜೋಡಣೆ ಸೇರಿದಂತೆ ಈ ಎಲ್ಲಾ ಶಸ್ತ್ರಚಿಕಿತ್ಸಾ ಕ್ರಮಗಳನ್ನು ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಕೀಲು ಮತ್ತು ಮಂಡಿ ಕಸಿ ಶಸ್ತ್ರಚಿಕಿತ್ಸೆಗಳಿಗೆ ದಕ್ಷಿಣ ಭಾರತದಲ್ಲಿಯೇ ರೋಬೊಟಿಕ್ಸ್ ತಂತ್ರವನ್ನು ಬಳಸಿದ ಮೊದಲ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರಶಾಂತ್ ಆಗಿದ್ದಾರೆ. ರೋಬೊಟಿಕ್ ತಂತ್ರಜ್ಞಾನದಲ್ಲಿ ಕಡಿಮೆ ಪ್ರಮಾಣದ ಸೀಳುಗಾಯ, ಕಡಿಮೆ ರಕ್ತನಷ್ಟ, ಮೂಳೆ ನಷ್ಟ ಉಂಟಾಗುವುದಲ್ಲದೆ ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ. ಹೆಚ್ಚಿನ ಹೂಡಿಕೆ ಮಾಡಿದ್ದರೂ ಕೂಡ ಹೆಚ್ಚುವರಿ ವೆಚ್ಚವಿಲ್ಲ. ಮಂಡಿ ಕಸಿ ಚಿಕಿತ್ಸೆಗಳ ರೋಗಿಗಳಿಗೆ ಇದರಿಂದ ಅನುಕೂಲ ಆಗಲಿದೆ.

Facebook Comments