ಬೆಂಗಳೂರಿನ ಡಾ.ರಾಜ್‍ಕುಮಾರ್ ರಸ್ತೆಗೆ 26 ವರ್ಷ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.26-ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಡಾ.ರಾಜ್‍ಕುಮಾರ್ ರಸ್ತೆಗೆ 26ನೇ ವರ್ಷದ ಸಂಭ್ರಮ. ನಗರದ ಪ್ರತಿಷ್ಠಿತ ಬಡಾವಣೆ ಎಂದೇ ಹೆಸರಾದ ರಾಜಾಜಿನಗರದ ಕರ್ನಾಟಕ ಸಾಬೂನು ಕಾರ್ಖಾನೆಯಿಂದ ಪ್ರಸನ್ನ ವೃತ್ತದವರೆಗೆ ಇರುವ 6 ಕಿಲೋ ಮೀಟರ್ ಉದ್ದದ 80 ಅಡಿ ಮುಖ್ಯರಸ್ತೆಗೆ ಕನ್ನಡದ ಮೇರು ನಟ ಪದ್ಮಭೂಷಣ ಡಾ.ರಾಜ್‍ಕುಮಾರ್ ರಸ್ತೆ ಎಂದು ನಾಮಕರಣವಾಗಿ ನಾಳೆಗೆ 25 ವರ್ಷಗಳು ಪೂರ್ಣಗೊಳ್ಳಲಿವೆ.

1994ರ ಜ.27 ರಂದು ಈ ರಸ್ತೆಗೆ ರಾಜ್‍ಕುಮಾರ್ ರಸ್ತೆ ಎಂದು ಹೆಸರಿಡಲಾಯಿತು. ಅಂದು ರಸ್ತೆಯ ಎಲ್ಲಾ ಅಂಗಡಿ, ಮನೆ, ವಾಣಿಜ್ಯ ಕಟ್ಟಡಗಳ ಬಳಿ ನಾಮಫಲಕ ನಾಡಧ್ವಜ ಹಾಗೂ ರಾಜ್ ಅವರ ಭಾವಚಿತ್ರವನ್ನು ತಳಿರು ತೋರಣ, ಹೂವಿನ ಕಮಾನುಗಳು, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.

ಅಂದು ನಡೆದ ಮೆರವಣಿಗೆ ಸಾಗುವ ದಾರಿಯುದ್ಧಕ್ಕೂ ರಾಜ್ ಅವರ ಹಾಡುಗಳೊಂದಿಗೆ ವಿವಿಧ ವಾದ್ಯ ಮೇಳ ಹಬ್ಬದ ಕಳೆ ಕಟ್ಟಿದರೆ ಸ್ವಯಂಪ್ರೇರಿತರಾಗಿ ಅಭಿಮಾನಿಗಳು, ಸ್ಥಳೀಯರು ಎಲ್ಲೆಡೆ ಸಿಹಿ ವಿತರಿಸಿ ಹರ್ಷ ವ್ಯಕ್ತಪಡಿಸಿದ್ದರು.

ಅಂದು ನಡೆದ ಅದ್ಧೂರಿ ನಾಡಹಬ್ಬದ ಸಮಾರಂಭದಲ್ಲಿ ರಾಜಕೀಯ ಗಣ್ಯರು, ಕಲಾವಿದರು, ಪಾಲಿಕೆ ಸದಸ್ಯರು, ಸಾಹಿತಿಗಳು, ಪತ್ರಿಕೋದ್ಯಮಗಳು, ಪೊಲೀಸ್ ಸಿಬ್ಬಂದಿ, ಆಟೋ ಚಾಲಕರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿ ದೇವರುಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಿದ್ದರು.

Facebook Comments