ಖ್ಯಾತ ಮಕ್ಕಳ ವೈದ್ಯ ಡಾ.ರಾಜೀವ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಕೊರೋನಾ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಹೆಸರಾಂತ ಮಕ್ಕಳ ವೈದ್ಯ ಡಾ. ರಾಜೀವ್ ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ‌‌ ಇಂದು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ; ಕೊರೋನಾ ಸೋಂಕು ತಗುಲಿದ್ದ ಅವರಿಗೆ ಕಳೆದೆರೆಡು ದಿನದಿಂದ ವೆಂಟಿಲೇಟರ್‌ (ಕೃತಕ ಉಸಿರಾಟ ವ್ಯವಸ್ಥೆ ) ಅಳವಡಿಸಲಾಗಿತ್ತು.

ಆದರೆ ಇಂದು ಅವರ ಆರೋಗ್ಯದಲ್ಲಿ ತೀವ್ರತರವಾದ ಏರುಪೇರಾಗಿದ್ದು ಬಹು ಅಂಗಾಂಗ ವೈಫಲ್ಯ ಕಾರಣ ಇಂದು ಸಾವನನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಹಾಸನದ ಹೆಸರಾಂತ ಮಕ್ಕಳ ತಜ್ಞರಾಗಿದ್ದ ರಾಜೀವ್ ಅವರು ರಾಜೀವ್ ಆಸ್ಪತ್ರೆ – ರಾಜೀವ್ ಇಂಜಿನಿಯರಿಂಗ್ ಕಾಲೇಜು ಮತ್ತು ಇತ್ತೀಚೆಗೆ ರಾಜೀವ್ ಆಯುರ್ವೇದಿಕ್ ಕಾಲೇಜ್ ಅನ್ನು ಸ್ಥಾಪನೆ ಮಾಡಿದ್ದರು.

Facebook Comments

Sri Raghav

Admin