ವರ ನಟ ಡಾ.ರಾಜ್‍ಕುಮಾರ್ ಕುರಿತ 209 ಪಂಚಪದಿ ಕೃತಿ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ವರನಟ ಡಾ.ರಾಜ್‍ಕುಮಾರ್‍ರವರ ಚಿತ್ರ ಜೀವನಕ್ಕೆ ಸಂಬಂಸಿದಂತೆ, ಅವರು ನಟಿಸಿರುವ ಮೊದಲನೇ ಚಿತ್ರ ಬೇಡರ ಕಣ್ಣಪ್ಪದಿಂದ ಹಿಡಿದು ಕೊನೆಯ ಚಿತ್ರ ಶಬ್ದವೇದಿವರೆಗಿನ 209 ಚಲನಚಿತ್ರಗಳಿಗೆ ಸಂಬಂಸಿದ 209 ಪಂಚಪದಿ ಕೃತಿ ಲೋಕಾರ್ಪಣೆಗೊಂಡಿದೆ.

ಹಾಲುವಾಗಿಲು ಮಂಜುನಾಥ್ ವಿರಚಿತ ರಾಜ್ ಕುರಿತ 209 ಪಂಚಪದಿ ಕೃತಿಯನ್ನು ರಾಜ್ ಕುಟುಂಬ ವರ್ಗದವರು ಸೇರಿದಂತೆ ನೂರು ಮಹನೀಯರು, 100 ಸ್ಥಳಗಳಲ್ಲಿ ಏಕ ಕಾಲಕ್ಕೆ ಲೋಕಾರ್ಪಣೆ ಮಾಡಿದರು. ವಿಶ್ವದ ಯಾವುದೇ ಕಲಾವಿದನ ಬಗ್ಗೆ ಇದುವರೆಗೂ ಬರೆಯಲಾಗದಂತಹ ಕೃತಿಯನ್ನು ಅದ್ಭುತವಾಗಿ ಬರೆದಿರುವ ಮಂಜುನಾಥ್ ಹಾಲುವಾಗಿಲು ಅವರ ರಾಜಕುಮಾರ ಪಂಚಪದಿ ಕೃತಿಯನ್ನು ಸ್ನೇಹ ಪ್ರಕಾಶನ ಹೊರ ತಂದಿದೆ.

ಭಾರತ ದೇಶದ ಸಾಹಿತ್ಯ ಕ್ಷೇತ್ರದ ಇತಿಹಾಸದಲ್ಲಿ ಈ ಕ್ಷಣದವರೆಗೂ ಯಾವುದೇ ಪುಸ್ತಕ ಬಿಡುಗಡೆಯಾಗದ ರೀತಿಯಲ್ಲಿ ಸಮಾಜದ ನೂರಾರು ಮಂದಿ ಗಣ್ಯಾತಿಗಣ್ಯರು ಈ ಪುಸ್ತಕವನ್ನು 100 ಪ್ರತ್ಯೇಕ ಸ್ಥಳಗಳಲ್ಲಿ ಬಿಡುಗಡೆ ಮಾಡಿರುವುದು ಅತ್ಯಂತ ವಿಶೇಷ.

ಸಿದ್ಧಗಂಗಾ ಶ್ರೀಗಳು, ಬರಗೂರು ರಾಮಚಂದ್ರಪ್ಪ, ಪ್ರೊ.ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಅರಳುಮಲ್ಲಿಗೆ ಪಾರ್ಥಸಾರಥಿ, ಚಕ್ರವರ್ತಿ ಸೂಲಿಬೆಲೆ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣï, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮï, ಧೃವ ಸರ್ಜಾ, ಯುವರಾಜ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್, ಮಾಜಿ ಮೇಯರ್,

ಎಸ್.ಕೆ.ನಟರಾಜ್, ಮಾಜಿ ಉಪ ಮೇಯರ್‍ಗಳಾದ ಎಸ್. ಹರೀಶ್, ಎಲ್. ಶ್ರೀನಿವಾಸ್, ಬಿಬಿಎಂಪಿ ಮಾಜಿ ಸದಸ್ಯರಾದ ಎ.ಎಚ್. ಬಸವರಾಜ್, ಗೋಪಿ, ಕೇಶವಮೂರ್ತಿ, ಚಂದ್ರಶೇಖರರಾಜು, ನಾಗರಾಜು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ನೂರಕ್ಕೂ ಹೆಚ್ಚು ಮಂದಿ ಮಹನೀಯರು ರಾಜಕುಮಾರ ಪಂಚಪದಿ ಕೃತಿಯನ್ನು ಊZ್ಚಛಿಚಿಟಟh ಔಜಿqಛಿನಲ್ಲಿ ಲೋಕಾರ್ಪಣೆ ಮಾಡಿದರು.

ಪಂಚಪದಿ ಕೃತಿಯು 05 ಸಾಲುಗಳಲ್ಲಿ ಆಯಾ ಚಿತ್ರಗಳ ಕಥೆ, ನಾಯಕ – ನಾಯಕಿಯ ಹೆಸರುಗಳನ್ನು ಒಳಗೊಂಡಂತೆ ಐದು ಸಾಲುಗಳ ಮೊದಲನೆ ಅಕ್ಷರಗಳು ಮೇಲಿನಿಂದ ಕೆಳಗೆ ಓದಿದಾಗ ರಾಜಕುಮಾರ ಪದವು ಬರುವಂತೆ ಅದ್ಭುತವಾಗಿ ರಚಿಸಿರುವ ರಾಜಕುಮಾರ ಪಂಚಪದಿ ಕೃತಿಯನ್ನು ಸಮಸ್ತ ಕನ್ನಡಿಗರು ಪಡೆದುಕೊಳ್ಳುವ ಮೂಲಕ ವರನಟ ಡಾ.ರಾಜ್‍ಕುಮಾರ್ ಅವರಿಗೆ ಗೌರವ ಸಮರ್ಪಣೆ ಮಾಡಬೇಕೆಂದು ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ.

Facebook Comments