ಅಂದು ಅಣ್ಣಾವ್ರ ಬಳಿ ಕ್ಷಮೆ ಕೇಳಿದ್ದರು ತಮಿಳು ನಟ ಎಂಜಿಆರ್..! ಕಾರಣವೇನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

ಪದ್ಮಭೂಷಣ ಡಾ|| ರಾಜ್‌ಕುಮಾರ್ ಅವರು ನಡೆದು ಬಂದ ಹಾದಿಯಲ್ಲಿ ಸಣ್ಣ ಸಣ್ಣ ವಿಚಾರಗಳು ನಮ್ಮ ಬದುಕಿಗೆ ಸ್ಪೂರ್ತಿದಾಯಕ ಎನ್ನಿಸುತ್ತೆ., ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲಾ, ತಮಿಳು ನಾಡಿನ ಜನ ಎಂ.ಜಿ. ಆರ್. ಅವರಿಗೆ ‘ನಾಡೋಡಿ ಮನ್ನನ್’ ಎಂಬ ಬಹುದೊಡ್ಡ ಪ್ರಶಸ್ತಿ ನೀಡಿದರು.

ಆದರೆ ಅದನ್ನು ಕೊಡುವವರು ಯಾರು? ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಎಂ.ಜಿ. ಆರ್. ಅವರು ‘ಜಗತ್ತಿನ ಸರ್ವ ಶ್ರೇಷ್ಠ’ ಕಲಾವಿದರೊಬ್ಬರು ನೀಡುತ್ತಾರೆ ಎಂದರಂತೆ. ಕಾರ್ಯಕ್ರಮದ ಆಯೋಜಕರಿಗೆ ಆಶ್ಚರ್ಯ, ಮದರಾಸಿನಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದ ದಿನ ಬೆಳಿಗ್ಗೆ ಎಂ.ಜಿ. ಆರ್. ಅವರು ಡಾ. ರಾಜಕುಮಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಇಂದು ನಮ್ಮದೊಂದು ಕಾರ್ಯಕ್ರಮವಿದೆ, ತಾವು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಿದರು.

ಡಾ. ರಾಜ್ ಅವರು ನನಗೆ ಹುಷಾರಿಲ್ಲದೆ ವಿಶ್ರಾಂತಿಯಲ್ಲಿದ್ದೇನೆ, ಕೂಡಲು ಆಗುತ್ತಿಲ್ಲ ಎಂದರಂತೆ. ಅದ್ದಕ್ಕೆ ಎಂ.ಜಿ. ಆರ್. ಅವರು ಒಂದು ಹತ್ತೇ ನಿಮಿಷ ದಯಮಾಡಿ ಬಂದು ಹೋಗಿ ಎಂದು ವಿನಂತಿಸಿದರಂತೆ, ಮಗುವಿನಂತಹ ಮನಸ್ಸಿನ ರಾಜ್‌ಕುಮಾರ್ ಬರಲು ಒಪ್ಪಿಂಡಿದ್ದಾರೆ.

ಮದರಾಸಿಗೆ ಹೋಗಿ ತಲುಪಿದ ರಾಜಕುಮಾರ್ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಸ್ವತಃ ಎಂ.ಜಿ. ಆರ್. ಅವರೇ ಕಾರಿನ ಬಳಿ ಹೋಗಿ ಡಾ. ರಾಜ್ ಅವರ ಕಾಲಿಗೆ ಹೂಗಳನ್ನು ಹಾಕುತ್ತಾ ವೇದಿಕೆಯವರೆಗೆ ಕರೆತಂದು ಕುಳ್ಳಿರಿಸಿ. ವಿಶ್ವದ ಶ್ರೇಷ್ಠ ಕಲಾವಿದರಾದ ಡಾ. ರಾಜ್‌ಕುಮಾರ್ ಅವರಿಂದ ಈ ಪ್ರಶಸ್ತಿ ಪಡೆಯಲು ನನಗೆ ಹೆಮ್ಮೆಯೆನಿಸಿದೆ ಎಂದು ಹೇಳಿದರಂತೆ, ವೇದಿಕೆ ಮೇಲಿದ್ದವರೆಲ್ಲಾ ತಬ್ಬಿಬ್ಬು.

ಕಲೆಗೆ ಭಾಷೆ, ಗಡಿ ಇವು ಇರುವುದಿಲ್ಲ ಎಂಬುದಕ್ಕೆ ಇದು ಶ್ರೇಷ್ಠ ಉದಾಹರಣೆ. ಸಾರ್ವಕಾಲಿಕ ಶ್ರೇಷ್ಠ ಕಲಾವಿದರು ಡಾ. ರಾಜ್ ಕುಮಾರ್ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಿಂತಲೂ ಕುತೂಹಲ ಕಾರಿ ಸಂಗತಿಗಳನ್ನು ತಿಳಿಯುವ ಆಸಕ್ತಿ ನಿಮಗಿದ್ದರೇ ತಪ್ಪದೆ ವಿಡಿಯೋ ನೋಡಿ.

Facebook Comments

Sri Raghav

Admin