ಸಾಹಸ ಸಿಂಹಿಣಿ : ಇವರೇ ನೋಡಿ ಭಾರತದ ಪ್ರಥಮ ಮಹಿಳಾ ಕಮಾಂಡೊ ಟ್ರೇನರ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.21- ಇಂದಿನ ಮಹಿಳೆಯರು ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಕೆಲ ವೀರನಾರಿಯರು ಅತ್ಯಂತ ಕಠಿಣ ಸವಾಲಿನ ಕಾರ್ಯಗಳಲ್ಲಿ ಯಶಸ್ವಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಇಂತಹ ಮಹಾಸಾಧಕಿಯರಲ್ಲಿ ಡಾ. ಸೀಮಾರಾವ್ ಕೂಡ ಒಬ್ಬರು. ಬಹುಮುಖ ಪ್ರತಿಭೆಯ ಈ ವಂಡರ್‍ವುಮನ್ ಭಾರತದ ಸೇನಾಪಡೆಯ ವಿಶೇಷ ದಳಗಳ ಕಮಾಂಡೊಗಳಿಗೆ ಮಾರ್ಷಲ್ ಆಟ್ರ್ಸ್ ಸೇರಿದಂತೆ ವಿವಿಧ ಯುದ್ಧ ಕೌಶಲ್ಯಗಳ ಬಗ್ಗೆ ತರಬೇತಿ ಭಾರತದ ಪ್ರಪ್ರಥಮ ಮತ್ತು ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಡಾ. ಸೀಮಾ 20 ವರ್ಷಗಳಿಂದ ಯಾವುದೇ ಹಣ ಮತ್ತು ಇತರ ಪ್ರತಿಫಲಾಪೇಕ್ಷೆ ಇಲ್ಲದೆ. ಕಮಾಂಡೊಗಳಿಗೆ ಉಚಿತವಾಗಿ ತರಬೇತಿ ನೀಡುತ್ತ ಗಮನ ಸೆಳೆದಿದ್ದಾರೆ. ಈ ಸಾಹಸಿ ಮಹಿಳೆಯ ಜೀವನ ಅತ್ಯಂತ ಸಾಹಸಮಯ. ಮಿಲಿಟರಿ ಮಾರ್ಷಲ್ ಆಟ್ರ್ಸ್‍ನಲ್ಲಿ 7ನೇ ಡಿಗ್ರಿ ಬ್ಲಾಕ್ ಬ್ಲೇಟ್ ಪಡೆದಿರುವ ಇವರು ಭಾರತದ ಏಕೈಕ ಮಹಿಳಾ ಕಮಾಂಡೊ ಟ್ರೇನರ್.

ಅಲ್ಲದೆ ಇವರು ಬಹುಮುಖ ಪ್ರತಿಭೆಯ ಮಹಿಳಾ ಸಾಧಕಿ. ಕಂಪ್ಯಾಟ್ ಶೂಟಿಂಗ್ ಇನ್ಸ್‍ಸ್ಟ್ರರ್, ಪೈರ್ ಪೈಟರ್, ಸ್ಕೂಬಾ ಡೈವರ್, ಶಿಖರಾರೋಹಿ ಮತ್ತು ಪ್ಯಾರಾ ಜಂಪರ್ ಜಂಪಿಂಗ್‍ನಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.

ಸೌಂದರ್ಯ ಮತ್ತು ಸಾಹಸದ ಸಂಯೋಜನೆಯಂತಿರುವ ಸೀಮಾರಾವ್ ಮಿಸೆಸ್ ಇಂಡಿಯಾ ವಲ್ರ್ಡ್ ಪೇಚಂಟ್ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ್ದ ಹೆಗ್ಗಳಿಯನ್ನು ಪಡೆದಿದ್ದಾರೆ.
ಇವರ ಮತ್ತೊಂದು ವಿಶೇಷತೆಂದರೆ 1960ರಲ್ಲಿ ವಿಶ್ವಖ್ಯಾತ ಕರಾಟೆ ಪಟು, ಬ್ರೂಸ್ಲಿ ಸೃಷ್ಟಿಸಿದ ವಿಶಿಷ್ಟ ಸಮರಕಲೆ ಜೀಟ್ ಕುನೆ ಡೊ ಎಂಬ ಮಾರ್ಷಲ್ ಆಟ್ರ್ಸ್‍ನಲ್ಲಿ ವಿಶ್ವ ಮಾನ್ಯತೆಯ ಪ್ರಮಾಣ ಪತ್ರ ಗಳಿಸಿದ ಪ್ರಪಂಚದ ಕೇವಲ ಹತ್ತು ಮಹಿಳೆಯರಲ್ಲಿ ಡಾ. ಸೀಮಾ ಕೂಡ ಒಬ್ಬರು.

ಇವರ ತಂದೆ ರಮಾಕಾಂತ್ ಸಿನಾರಿ ಸ್ವಾತಂತ್ರ ಹೋರಾಟಗಾರರು. ಹೀಗಾಗಿ ಬಾಲ್ಯದಿಂದ ದೇಶಪ್ರೇಮ ಎಂಬುದು ಡಾ. ಸೀಮಾ ಅವರ ನರನಾಡಿಗಳಲ್ಲಿ ಹರಿಯುತ್ತಿತ್ತು. 12ನೇ ವಯಸ್ಸಿನಲ್ಲಿ ಇವರು ಸಮರಕಲೆ ಅಭ್ಯಾಸ ಮಾಡುವುದನ್ನು ಕಲಿತು ಅದರಲ್ಲಿ ಪರಿಣಿತಿ ಪಡೆದರು.

ನಂತರ ಇವರು ಸೇನೆಯಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದ ಮೇಜರ್ ದೀಪಕ್ ರಾವ್ ಅವರನ್ನು ಮದುವೆಯಾದರು. ಸೀಮಾ ಅವರಿಗೆ ಅವರ ಪತಿಯಿಂದ ಎಲ್ಲ ರೀತಿಯ ಪೆÇ್ರೀತ್ಸಾಹ ಮತ್ತು ಸಹಕಾರ ಲಭಿಸಿತು. ಮೇಜರ್ ದೀಪಕ್ ಅವರು ಅಪಾರ ದೇಶ ಭಕ್ತರು. ಭಾರತ ಸೇನಾ ಪಡೆಯಲ್ಲಿ 20 ವರ್ಷಗಳ ಸುದೀರ್ಘ ಶ್ಲಾಘನೀಯ ಸೇವೆ ಸಲ್ಲಿಸಿದ್ದಕ್ಕಾಗಿ ರಾಷ್ಟ್ರಪತಿಯವರಿಂದ ಪದಕ ಗಳಿಸಿದ ಹೆಗ್ಗಳಿಕೆ ಇವರದು.

ಆದರ್ಶ ಮತ್ತು ಅಪರೂಪದ ದಂಪತಿಗಳಾದ ಮೇಜರ್ ದೀಪಕ್-ಸೀಮಾರಾವ್ ಅವರು ಭಾರತೀಯ ಸೇನಾ ಪಡೆಯ ವಿವಿಧ ವಿಶೇಷ ಕಮಾಂಡೋ ಘಟಕಗಳಿಗೆ ಜಂಟಿಯಾಗಿ ಮಾರ್ಷಲ್ ಆಟ್ರ್ಸ್, ಶೂಟಿಂಗ್ ಇತ್ಯಾದಿ ಕೌಶಲ್ಯಗಳ ಬಗ್ಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.

ಎನ್‍ಎಸ್‍ಜಿ ಬ್ಲಾಕ್ ಕ್ಯಾಟ್ಸ್, ಮಾರ್ಕೋಸ್, ಗರುಡ್, ಪ್ಯಾರಾ ಕಮಾಂಡೊಗಳು, ಬಿಎಸ್‍ಎಫ್, ಆರ್ಮಿ ಕಾಪ್ರ್ಸ್ ಬ್ಯಾಟಲ್ ಸ್ಕೂಲ್ಸ್ ಮತ್ತು ಅದರ ಕಮಾಂಡೊ ದಳಗಳು ಸೇರಿದಂತೆ ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುಪಡೆಯ ಯೋಧರಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.

ಪುರುಷ ಪ್ರಾಬಲ್ಯದ ಯುದ್ಧ ಕೌಶಲ್ಯ ತರಬೇತಿ ನೀಡಲು ಕೇಂದ್ರ ಸರ್ಕಾರವೇ ಡಾ. ಸೀಮಾರಾವ್ ಅವರನ್ನು ನಿಯೋಜಿಸಿ ಭಾರೀ ಸಂಭಾವನೆ ನೀಡಲು ಮುಂದಾಗಿದ್ದರೂ ಇವರು ಕಳೆದ 20 ವರ್ಷಗಳಿಂದ ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ಉದಾತ್ತ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಸೀಮಾ ಅವರ ಸೇವೆಯನ್ನು ಪರಿಗಣಿಸಿ ಭಾರತೀಯ ಸೇನಾ ಪಡೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ.

Facebook Comments

Sri Raghav

Admin