ಸುಪ್ರೀಂ ತೀರ್ಪುಗೂ ಮುನ್ನ ಎಮೋಷನಲ್ ಟ್ವಿಟ್ ಮಾಡಿದ ಡಾ.ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.13- ಅನರ್ಹತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವ ಮುನ್ನ ಉದ್ವೇಗಕ್ಕೆ ಒಳಗಾಗದಂತೆ ಕಂಡು ಬಂದ ಡಾ.ಸುಧಾಕರ್ ಅವರು, ಪದೇ ಪದೇ ಟ್ವಿಟ್ ಮಾಡುವ ಮೂಲಕ ತಮ್ಮ ಬೆಂಬಲಿಗರ ಜತೆ ಸಂವಹನ ನಡೆಸಿದ್ದಾರೆ.

ನನಗಾಗಿ ಪ್ರಾರ್ಥನೆ ಮಾಡಿ, ನನಗೆ ನಿಮ್ಮ ಬೆಂಬಲ ಬೇಕು, ನನ್ನ ಕ್ಷೇತ್ರಕ್ಕೆ ಸೇವೆ ಮಾಡಲು ಬಯಸುತ್ತೇನೆ, ರಾಷ್ಟ್ರ ಸೇವೆಗಾಗಿ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸಮರ್ಪಿಸಿಕೊಳ್ಳುತ್ತಿದ್ದೇನೆ.

ಈ ಉದ್ದೇಶಕ್ಕಾಗಿ ನನಗೆ ಇನ್ನಷ್ಟು ಶಕ್ತಿ ತುಂಬಿ ಆಶೀರ್ವದಿಸಿ ಎಂದು ಮೊದಲ ಟ್ವಿಟ್ ಆರಂಭಿಸಿದ ಅವರು, ಅನಂತರ ನನ್ನ ರಾಜೀನಾಮೆಯ ನಂತರ ನಾನು ಕಳೆದ 123 ದಿನಗಳಲ್ಲಿ ಯಾರೂ ನನ್ನ ನಿಜವಾದ ಆತ್ಮೀಯರು ಹಾಗೂ ಹಿತೈಷಿಗಳು ಎಂಬುದನ್ನು ಅರಿತಿದ್ದೇನೆ ಎಂದಿದ್ದಾರೆ.

ನನ್ನ ಕಷ್ಟದ ದಿನಗಳಲ್ಲಿ ನನ್ನೊಂದಿಗೆ ಇದ್ದವರಿಗೆ ನಾನು ಅಪಾರ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಸೂರ್ಯಾಸ್ತಮ ಮುಗಿಯುತ್ತಿದ್ದು, ನೂತನ ಸೂರ್ಯೋದಯಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

Facebook Comments