ಡಿಕೆಶಿ ಹೇಳಿಕೆಗೆ ಸುಧಾಕರ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಅ.30- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕನಕಪುರಕ್ಕೆ ಮಾತ್ರ ಸೀಮಿತವಾದವರಂತೆ ಮಾತನಾಡುತ್ತಾರೆ. ಮೆಡಿಕಲ್ ಕಾಲೇಜನ್ನು ನನ್ನ ಪ್ರಾಣ ಹೋದರೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆ, ಮೆಡಿಕಲ್ ಎಂಬುದು ನಮ್ಮಗಳ ಪ್ರಾಣ ಉಳಿಸಲಿಕ್ಕೆ ಇರುವುದು ಎಂಬುದನ್ನು ಅವರು ಮರೆತಿದ್ದಾರೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಮೆಡಿಕಲ್ ಕಾಲೇಜ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೊಗಲು ಬಿಡೊಲ್ಲ ಎನ್ನುವ ಮಾತಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಪಾಪ ಮೆಡಿಕಲ್‍ಗಾಗಿ ಪ್ರಾಣ ಬಿಡಿತ್ತೀನಿ ಅಂತ ಹೇಳಿದ್ದಾರೆ. ಹೋಗೋ ಪ್ರಾಣಗಳನ್ನು ಉಳಿಸಲಿಕ್ಕೆ ಮೆಡಿಕಲ್ ಕಾಲೇಜು ಇರುವುದು ಎಂಬುದನ್ನು ಮರೆತಂತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಜೆಟ್‍ನಲ್ಲಿ ಮಂಜೂರು ಮಾಡಿದ್ದರು. ಡಿ.ಕೆ.ಶಿವಕುಮಾರ್ ಕನಕಪುರ ಕರ್ನಾಟಕದಲ್ಲಿ ಒಂದು ತಾಲ್ಲೂಕು ಎಂಬುದನ್ನು ತಿಳಿದಂತಿಲ್ಲ. ಮೊದಲು ಅದೊಂದು ತಾಲ್ಲೂಕು ಎಂಬುದನ್ನು ತಿಳಿದುಕೊಳ್ಳಲಿ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಮೃತ ಹಸ್ತದಲ್ಲಿಯೇ ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಉಪ ಚುನಾವಣೆಗೂ ಮುನ್ನವೇ ನೆರವೇರಿಸುವುದು ಶತ ಸಿದ್ದ ಎಂದು ಸ್ಪಷ್ಟಪಡಿಸಿದರು.

Facebook Comments