ಸುರೇಶ್ ಅಂಗಡಿ ವಿಧಿವಶ : ಮಗನ ಮುಖ ನೋಡಲಾಗದೆ ತಾಯಿ ಕಣ್ಣೀರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಸೆ.24- ಮಗನ ಸಾವಿನ ವಿಷಯ ತಿಳಿದ ಆ ತಾಯಿ ಹೃದಯ ಮಮ್ಮಲ ಮರುಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ವೃದ್ಧ ತಾಯಿ ಸೋಮವ್ವ ಅವರ ದುಃಖದ ಕಟ್ಟೆಯೊಡೆದಿದೆ. ಕಣ್ಣಿರ ಕಡಲಲ್ಲಿ ಮುಳುಗಿರುವ ಆ ತಾಯಿಗೆ ಸಾವನ್ನಪ್ಪಿರುವ ಮಗನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.

ತಂದೆ ತಾಯಿಯ ಮುಂದೆ ಮಕ್ಕಳನ್ನು ಕಳೆದುಕೊಂಡಾಗ ಆ ಹೆತ್ತ ಕರುಳಿನ ನೋವು ಹೇಳತೀರದು. ಮಗನನ್ನು ಕಳೆದುಕೊಂಡ ವೃದ್ಧ ತಾಯಿ ಸೋಮವ್ವಾ ಬಿಕ್ಕಿಬಿಕ್ಕಿ ಕಣ್ಣೀರಿಡುತ್ತಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಅವರ ಪತ್ನಿ ಮಂಗಲ, ಪುತ್ರಿ ಶೃದ್ಧಾ ಹಾಗೂ ಅಳಿಯಂದಿರು ಅಲ್ಲೇ ಇದ್ದಾರೆ.

ಇನ್ನುಳಿದ ಕುಟುಂಬದ ಸದಸ್ಯರಾದ ಹಿರಿಯ ಪುತ್ರಿ ಡಾ.ಸ್ಫೂರ್ತಿ ಪಾಟೀಲ, ಮೊಮ್ಮಗಳು ರಿದ್ಧಶಾ ಹಾಗೂ ಅಂತ್ಯ ಸಂಸ್ಕಾರ ನೆರವೇರಿಸಲಿರುವ ಬಾಳಯ್ಯ ಹಿರೇಮಠ ಮತ್ತು ಆಪ್ತ ಸಹಾಯಕರಾದ ಶ್ರೀಕಾಂತ ಕಟಕೋಳ, ರಂಗನಾಥ ದೇಶಪಾಂಡೆ, ರಾಜು ಜೋಶಿ, ಸಂತೋಷ ತುಬಚಿ ಸೇರಿದಂತೆ ಕೆಲವರು ದೆಹಲಿಗೆ ತೆರಳಿದ್ದಾರೆ

Facebook Comments