ಆಕಾಶ್-1ಎಸ್ ಕ್ಷಿಪಣಿ ಪ್ರಯೋಗ ಯಶಸ್ಸಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.13-ಕೇಂದ್ರ ರಕ್ಷಣಾ ಇಲಾಖೆ ಅತ್ಯಾಧುನಿಕ ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯಲ್ಲಿ ಮತ್ತೊಂದು ಯಶಸ್ಸು ಸಾಧಿಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ) ರಾಜಸ್ತಾನ ಪೋಖ್ರಾನ್ ಮರುಭೂಮಿಯಲ್ಲಿ ಭೂಮಿಯಿಂದ ಗಗನಕ್ಕೆ ಚಿಮ್ಮುವ ಆಕಾಶ್-1ಎಸ್ ಕ್ಷಿಪಣಿ ವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಿತು. ಎರಡು ದಿನಗಳಲ್ಲಿ ನಡೆದ ಎರಡನೇ ಕ್ಷಿಪಣಿಯ ಯಶಸ್ವಿ ಪರೀಕ್ಷೆ ಇದಾಗಿದೆ.

ಇದು ಆಕಾಶ್ ಸರಣಿಯ ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ವೈರಿಗಳ ಫೈಟರ್ ಜೆಟ್‍ಗಳು ಮತ್ತು ಡ್ರೋಣ್‍ಗಳನ್ನು ತುಂಬಾ ಪರಿಣಾಮಕಾರಿಯಾಗಿ ಮತ್ತು ಅತ್ಯಂತ ನಿಖರವಾಗಿ ಹೊಡೆದುರುಳಿಸುವ ಸಾಮಥ್ರ್ಯವನ್ನು ಆಕಾಶ್-1ಎಸ್ ಹೊಂದಿದೆ.

ಯುದ್ಧ ವಿಮಾನಗಳು, ಖಂಡಾಂತರ ಕ್ಷಿಪಣಿಗಳು, ಆಗಸದಿಂದ ಆಗಸಕ್ಕೆ ಹಾರುವ ಕ್ಷಿಪಣಿಗಳು ಮತ್ತು ಮಾನವರಹಿತ ವಿಮಾನಗಳಂಥ ವಾಯು ಗುರಿಯನ್ನು ನಿಷ್ಕ್ರ್ರಿಯಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. 18 ರಿಂದ 30 ಕಿ.ಮೀ.ಗಳ ದೂರದ ವೈರಿಗಳ ಗುರಿಯನ್ನು ಕರಾರುವಕ್ಕಾಗಿ ತಲುಪುವ ಸಾಮಥ್ರ್ಯ ಇದಕ್ಕಿದೆ.

ವಿದ್ಯುನ್ಮಾನ ಸಮರಕೌಶಲ್ಯವನ್ನು ಪರಿಣಾಮಕಾರಿಯಾಗಿ ಪ್ರತಿರೋಧಿಸಲು ನೆರವಾಗುವಂತೆ ಏರ್ ಡಿಫೆನ್ಸ್ ಕಮಾಂಡ್ ಮತ್ತು ಕಂಟ್ರೋಲ್ ನೆಟ್‍ವರ್ಕ್‍ಗಳೊಂದಿಗೆ ಕ್ಷಿಪಣಿ ಸಂಪರ್ಕ ಹೊಂದಲು ಸುಧಾರಿತ ಇಸಿಸಿಎಂ(ವಿದ್ಯುನ್ಮಾನ ಪ್ರತಿರೋಧಕ ಕ್ರಮಗಳು) ತಂತ್ರಜ್ಞಾನವನ್ನು ಆಕಾಶ್-1ಎಸ್ ಕ್ಷಿಪಣಿಗೆ ಅಳವಡಿಸಲಾಗಿದೆ.

ಡಿಆರ್‍ಡಿಒ ಇತ್ತೀಚೆಗೆ ರಾಜಸ್ತಾನದ ಪೋಖ್ರಾನ್‍ನಲ್ಲಿ ಸುಖೋಯ್ ಫೈಟರ್ ಜೆಟ್‍ನಿಂದ 500 ಕೆಜಿ ಮಾರ್ಗದರ್ಶಿ ಬಾಂಬ್ ದಾಳಿಯನ್ನು ಯಶಸ್ವಿಯಾಗಿ ನಡೆಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin