ಸ್ಟಾರ್ ವಾರ್ಸ್ ಸಿನಿಮಾ ಶೈಲಿಯ ಯುದ್ಧಾಸ್ತ್ರಗಳ ನಿರ್ಮಾಣಕ್ಕೆ ಮುಂದಾದ ಡಿಆರ್‌ಡಿಒ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.13- ಭವಿಷ್ಯದಲ್ಲಿ ಎದುರಾಗ ಬಹುದಾದ ಯುದ್ಧ ಸನ್ನಿವೇಶಗಳನ್ನು ಎದುರಿಸಲು ಭಾರತ ಈಗಿನಿಂದಲೇ ಕಾರ್ಯೋನ್ಮುಖವಾಗಿದೆ.  ಇದೇ ಉದ್ದೇಶಕ್ಕಾಗಿ ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸ್ಟಾರ್ ವಾರ್ಸ್ ಶೈಲಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ನಿಮಾರ್ಣದತ್ತ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.

ಹೈ ಎನರ್ಜಿ ಲೇಸರ್‍ಗಳು ಮತ್ತು ಹೈ ಪವರ್ಡ್ ಮೈಕ್ರೋವೇವ್‍ನಂಥ ನಿರ್ದೇಶಿತ ಶಕ್ತಿಯ ಯುದ್ಧಾಸ್ತ್ರಗಳ (ಡೈರೆಕ್ಟೆಡ್‍ಎನಜಿ ವೆಪನ್ಸ್‍ಡಿಇಡಬ್ಲ್ಯು) ಕುರಿತರಾಷ್ಟ್ರೀಯಯೋಜನೆಯನ್ನು ರೂಪಿಸಿವೆ.

ಭವಿಷ್ಯದ ಯುದ್ಧಗಳು ಮತ್ತು ಸಂಪರ್ಕ ರಹಿತ ಸಂಘರ್ಷಗಳಿಗಾಗಿ ಅಮೆರಿಕ ಸೇರಿದಂತೆ ವಿಶ್ವದ ಪ್ರಬಲ ದೇಶಗಳು ಈಗಾಗಲೇ ತಾರಾ ಸಮರದಂಥ ಆಲ್ಟ್ರಾ ಹೈ-ಟೆಕ್ ವೇಪನ್‍ಗಳ ಪ್ರಯೋಗ ಮತ್ತು ಅಭಿವೃದ್ದಿಯಲ್ಲಿತೊಡಗಿದ್ದು. ಭಾರತವೂ ಸಹ ಈ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗಿದೆ.

ಡಿಇಡಬ್ಲ್ಯುಕುರಿತರಾಷ್ಟ್ರೀಯ ಯೋಜನೆಯು ಲಘು, ಮಧ್ಯಮ ಮತ್ತುದೂರಗಾಮಿ ಉದ್ದೇಶವನ್ನು ಹೊಂದಿದೆ. ಪ್ರಧಾನಮಂತ್ರಿ ಅವರು ಮೇಕ್‍ಇನ್‍ಇಂಡಿಯಾ ಯೋಜನೆ ಅಡಿ ದೇಶೀಯ ಉದ್ಯಮಗಳ ಸಹಭಾಗಿತ್ವದೊಂದಿಗೆ 100 ಕಿಲೋವ್ಯಾಟ್ ಸಾಮಥ್ರ್ಯದವರೆಗೂ ವಿವಿಧ ನಿರ್ದೇಶಿತ ಶಕ್ತಿಯ ಶಸ್ತ್ರಾಸ್ತ್ರಗಳನ್ನು ಅಭಿವೃದ್ದಿಗೊಳಿಸಲಾಗುತ್ತದೆ.

ಡಿಆರ್‌ಡಿಒ ಬಹು ಹಿಂದಿನಿಂದಲೂ ಹಲವಾರು ಡಿಇಡಬ್ಲ್ಯು ಯೋಜನೆಗಳ ಕುರಿತು ಕಾರ್ಯನಿರ್ವಹಿಸುತ್ತಿದೆ. ಕೆಮಿಕಲ್ ಆಕ್ಸಿಜನ್ ಆಯೋಡಿನ್ ಮತ್ತು ಹೈ ಪವರ್ಡ್ ಫೈಬರ್ ಲೇಸರ್‍ಗಳಿಂದ ಮೊದಲ್ಗೊಂಡು ಕಣಗಳ ಕಿರಣ ಅಸ್ತ್ರಗಳ ತನಕ ಸ್ಟಾರ್ ವಾರ್ಸ್ ವೇಪನ್‍ಗಳ ತಯಾರಿಕೆಯಲ್ಲಿದೆ.

ವೈರಿಗಳ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಬೀಮ್ ಬಳಸಿ ಸಾಫ್ಟ್‍ಕಿಲ್ (ಬೆಳಕಿನ ಕಿರಣ ಹಾಯಿಸಿ ಕ್ಷಣದಲ್ಲೇ ನುಚ್ಚುನೂರು ಮಾಡುವ) ತಂತ್ರಜ್ಞಾನಗಳು ಇದಾಗಿವೆ.

Facebook Comments