ಡ್ರೈ ಫ್ರೂಟ್ಸ್ ಏಕೆ, ಹೇಗೆ, ಯಾವಾಗ ತಿನ್ನಬೇಕು…?

ಈ ಸುದ್ದಿಯನ್ನು ಶೇರ್ ಮಾಡಿ

ಒಣಹಣ್ಣುಗಳು ಹಾಗೂ ನಟ್ಸ್ಗಳ ಸೇವನೆಯು ಆರೋಗ್ಯಕ್ಕೆ ಬಹಳ ಪೂರಕ ಎಂದು ತಜ್ಞರು ಹೇಳುತ್ತಾರೆ. ಫಲವಸ್ತುಗಳಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದ ಆ್ಯಂಟಿ ಒಕ್ಸಿಡೆಂಟ್ ಗಳು ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಗಳಲ್ಲಿ ಇರುತ್ತವೆ.

ಈ ಆ್ಯಂಟಿ ಒಕ್ಸಿಡೆಂಟ್ ಗಳು ಉರಿಯೂತ ತಡೆಯಲು ಮತ್ತು ದೇಹಕ್ಕೆ ಉಂಟಾಗುವ ಹಾನಿಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಣ ಬೀಜಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ನಾರಿನಂಶ, ಆರೋಗ್ಯಕರ ಕೊಬ್ಬು, ವಿಟಮಿನ್ಸ್ ಮತ್ತು ಖನಿಜಾಂಶಗಳಿರುತ್ತವೆ.

ಇವುಗಳ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ, ರಕ್ತನಾಳಗಳ ಕಾರ್ಯವನ್ನು ಉತ್ತಮಗೊಳಿಸಿ ಕೀಲುಗಳು ಮತ್ತು ಮಾಂಸಖಂಡಗಳನ್ನು ಧೃಢವಾಗಿಸುತ್ತದೆ.

ಆದರೆ ಕೆಲವು ಒಣ ಬೀಜಗಳಲ್ಲಿ ಕೊಬ್ಬಿನಂಶ ಅಧಿಕವಾಗಿರುವುದರಿಂದ ಅದು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಬಾರದೆಂದರೆ ಅದನ್ನು ಕೆಲವು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕಾಗುತ್ತದೆ.

‘ನಟ್ಸ್ ಗಳಲ್ಲಿ ಕಬ್ಬಿಣಾಂಶ, ವಿಟಮಿನ್ಸ್, ಖನಿಜಾಂಶಗಳು, ಕ್ಯಾಲ್ಶಿಯಂ, ಒಮೆಗಾ 3 ಎಂಬ ಪೋಷಕಾಂಶಗಳು ಮಾತ್ರವಲ್ಲದೆ, ತಾಮ್ರ, ಮ್ಯಾಂಗನೀಸ್, ಮೆಗ್ನೀಶಿಯಂ, ಪೊಟ್ಯಾಶಿಯಂ ಮತ್ತು ಝಿಂಕ್ ಅಂಶಗಳೂ ಹೇರಳವಾಗಿವೆ. ಇವನ್ನೆಲ್ಲಾ ದೇಹದ ಶಕ್ತಿ ವರ್ಧಕಗಳೆಂದು ಕರೆಯುತ್ತೇವೆ.

ಒಣಹಣ್ಣುಗಳು ಈ ನಿಟ್ಟಿನಲ್ಲಿ ಬಹಳ ಸಹಾಯಕಾರಿಯಾಗಿವೆ. ಒಣದ್ರಾಕ್ಷಿ, ಅಂಜೂರ, ಖರ್ಜೂರ ಅಥವಾ ಒಣಖರ್ಜೂರ, ಒಣ ಚೆರ್ರಿಗಳು, ಎಪ್ರಿಕಾಟ್ಗಳು ಶರ್ಕರಪಿಷ್ಟವನ್ನು ಹೊಂದಿರುವಂತಹ ಪದಾರ್ಥಗಳು.

ಇವುಗಳ ಸೇವನೆಯಿಂದ ವೇಗವಾಗಿ ದೇಹಕ್ಕೆ ಶಕ್ತಿ ದೊರಕುವುದೊಂದೇ ಅಲ್ಲದೆ ದೇಹಕ್ಕೆ ಅಗತ್ಯವಿರುವ ಅನೇಕ ರೀತಿಯ ಪೋಷಕಾಂಶಗಳು ಲಭ್ಯವಾಗುತ್ತವೆ. ದೇಹದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೂ ಅನುವು ಆಗುತ್ತದೆ. ಜೇನುತುಪ್ಪವನ್ನು ಇದರೊಟ್ಟಿಗೆ ಸೇರಿಸಿ ತೆಗೆದುಕೊಳ್ಳಬಹುದು.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡಬಹುದಾದ ಶೀತ, ನೆಗಡಿಯಂತಹ ತೊಂದರೆಗಳನ್ನು ನಿರ್ವಹಣೆ ಮಾಡಲು ಸಹಾಯಕಾರಿ. ಚರ್ಮದ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು.

ಮಕ್ಕಳಿಗೆ ಪ್ರತಿನಿತ್ಯ ಒಣಹಣ್ಣು ಮತ್ತು ನಟ್ಸ್ಗಳನ್ನು ತಿನ್ನುವ ರೂಢಿ ಮಾಡಿಸಿ. ಮಿದುಳು ಚುರುಕಾಗಲು ಹಾಗೂ ಮಗು ಆರೋಗ್ಯವಾಗಿರಲು ಇದರಿಂದ ಸಾಧ್ಯ. ಒಣಹಣ್ಣುಗಳಲ್ಲಿ ಕೆಲವು ಬಾರಿ ರಾಸಾಯನಿಕಗಳು ಇರುವುದರಿಂದ ಇವುಗಳನ್ನು ಐದರಿಂದ ಆರು ತಾಸು ನೀರಿನಲ್ಲಿ ನೆನೆಸಿ ಆ ನೀರನ್ನು ಚೆಲ್ಲಿ ಸೇವಿಸುವುದು ಉತ್ತಮ.

Facebook Comments