ಸಾಂಸಾರಿಕ ಕಲಹ : ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಪತಿ ಆತ್ಮಹತ್ಯೆ..

ಈ ಸುದ್ದಿಯನ್ನು ಶೇರ್ ಮಾಡಿ

ಕೊರಟಗೆರೆ, ಡಿ.2- ಸಾಂಸಾರಿಕ ಜೀವನದ ಏರುಪೇರಿನಲ್ಲಿ ಪತ್ನಿಯರ ಹೊಂದಾಣಿಕೆ ಆಗಲಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಬ್ಬ ಅತಿಯಾದ ಮದ್ಯ ಸೇವಿಸಿ ಸಾವನ್ನಪ್ಪಿದರೆ, ಮತ್ತೊಬ್ಬ ಪತಿ ಮದ್ಯಪಾನಕ್ಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಅಪ್ಪಾರೆಡ್ಡಿ ಎಂಬುವರು ಅತಿಯಾದ ಮದ್ಯಪಾನ ಮಾಡಿ ರಸ್ತೆ
ಬದಿಯಲ್ಲಿ ಜ್ಞಾನ ತಪ್ಪಿ ಬಿದ್ದು ಸಾವನ್ನಪ್ಪಿದರೆ, ಮತ್ತೊಬ್ಬ ಮದ್ಯಪಾನದ ಜತೆ ಕ್ರಿಮಿನಾಶಕ ಸೇರಿಸಿಕೊಂಡು ಕುಡಿದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ತಮಿಳುನಾಡು ಮೂಲದ ಅಪ್ಪಾರೆಡ್ಡಿ ಮೊದಲನೆ ಹೆಂಡತಿಯನ್ನು ತಮಿಳುನಾಡಿನಲ್ಲಿ ವಾಸವಿದ್ದು , ಎರಡನೆ ಪತ್ನಿ ಗೌರಿಬಿದನೂರಿನಲ್ಲಿ ವಾಸವಾಗಿದ್ದರು, ಈತ ಕೊರಟಗೆರೆಯ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡಿಕೊಂಡಿದ್ದ.

ಇಬ್ಬರು ಹೆಂಡತಿಯರಿಂದಲೂ ಸಾಂಸಾರಿಕ ಜೀವನ ಕುರಿತಂತೆ ಯಾವುದೇ ಸ್ಪಂದನೆ ಸಿಗದ ಕಾರಣ ಜಿಗುಪ್ಸೆಗೊಂಡು ಅತಿಯಾದ ಮದ್ಯಪಾನ ಸೇವಿಸಿ ಬೈಪಾಸ್‍ನ ಪಾಳು ಮನೆ ಬಳಿ ಅತಿಯಾಗಿ ಮದ್ಯ ಸೇವಿಸಿ ಚಳಿ, ಗಾಳಿಗೆ ಮಧ್ಯರಾತ್ರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಭೂತರಾಯ ಎಂಬ ವ್ಯಕ್ತಿ ತೋವಿನಕೆರೆ ಹೋಬಳಿಯ ಕಬ್ಬಿಗೆರೆ ಗೊಲ್ಲರಹಟ್ಟಿಯಲ್ಲಿ ಮೊದಲನೆ ಹೆಂಡತಿ ಬುಕ್ಕಾ ಪಟ್ಟಣದಲ್ಲಿ ವಾಸವಿದ್ದು, ಮನಸ್ತಾಪದಿಂದ ಎರಡನೆ ಪತ್ನಿಯೊಂದಿಗೆ ಬೆಳ್ಳಾವಿ ಹೋಬಳಿಯ ಗೊಲ್ಲಹಳ್ಳಿಯಲ್ಲಿ ಜೀವನ ಸಾಗಿಸುತ್ತಿದ್ದ.

ಕಳೆದ ಎರಡು ಮೂರು ವರ್ಷಗಳಿಂದ ಇಬ್ಬರಲ್ಲೂ ಹೊಂದಾಣಿಕೆಯಾಗದೆ ಎರಡನೆ ಪತ್ನಿಯೂ ಸಹ ಬಿಟ್ಟು ಹೋದ ಕಾರಣ ಮನ ನೊಂದು ಮದ್ಯಪಾನಕ್ಕೆ ಕ್ರಿಮಿನಾಶಕ ಸೇವಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಕೂಡಲೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸಿಪಿಐ ಸಿದ್ದರಾಮೇಶ್ವರ , ಪಿಎಸ್‍ಐ ನಾಗರಾಜ್ ಪ್ರತ್ಯೇಕ ಪ್ರಕರಣಗಳ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Facebook Comments