ಕೊಮಿನ್ ಕುಡಿಯುವ ನೀರಿನ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ಚೀನಾದ ಗ್ವಾಂಗ್‍ಝೊನಲ್ಲಿ ನಡೆದ ಅಂತಾರಾಷ್ಟ್ರೀಯ ಅತ್ಯುತ್ತಮ ರುಚಿ ಹೊಂದಿರುವ ಮಿನರಲ್ ವಾಟರ್ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ಸಂಕೇಶ್ವರ ವೆಂಚರ್ಸ್ ಸಂಸ್ಥೆ ತಯಾರಿಸುವ ಕೊಮಿನ್‍ಗೆ ಅತ್ಯುತ್ತಮ ಕುಡಿಯುವ ನೀರಿನ ಪ್ರಶಸ್ತಿ ಸಿಕ್ಕಿದೆ.

ನೈಸರ್ಗಿಕ ನೀರಿನ ಉತ್ಪನ್ನವಾಗಿರುವ ಕೊಮಿನ್‍ಗೆ ಕಂಚಿನ ಪದಕ ಹೊಂದಿದ್ದು , ನಮಗೆ ಅತ್ಯಂತ ಸಂತೋಷ ತಂದಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ವಿಜಯಮಾನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದ ಸಹ್ಯಾದ್ರಿ ಬೆಟ್ಟದ ನೈಸರ್ಗಿಕ ತಾಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿ ನೇರವಾಗಿ ಏನನ್ನು ಸೇರಿಸದೆಯೇ ಸಂಸ್ಕರಣವನ್ನು ಬಳಸದೆ ನೇರವಾಗಿ ಬಳಸುವ ನೀರು ದೇಶದ 22 ಕಡೆ ಸಿಗುತ್ತದೆ.

ಇದರಂತೆ ಹಿಮಾಚಲ ಪ್ರದೇಶದಲ್ಲಿ 18 ತಪ್ಪಲುಗಳಿದ್ದು , 2 ಗುಜರಾತ್‍ನಲ್ಲಿದೆ. ಬಾಕಿ 2 ಮಾತ್ರ ದಕ್ಷಿಣ ಭಾರತದಲ್ಲಿ ಅದುವೇ ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲಿನಲ್ಲಿದೆ. ಇಂತಹ ಒಂದು ತಾಣದಲ್ಲಿ ಸದರಿ ಕೊಮಿನ್ ನೈಸರ್ಗಿಕ ಮಿನರಲ್ ವಾಟರ್ ಅನ್ನು ಪ್ಯಾಕ್ ಮಾಡಿ ಹಂಚಲಾಗುತ್ತಿದೆ.

ಮನುಷ್ಯನ ಯಾವುದೇ ಹಸ್ತಕ್ಷೇಪವಿಲ್ಲದೆಯೇ ನೈಸರ್ಗಿಕವಾಗಿ ಲಭ್ಯವಾಗುವ ನೀರನ್ನು ಅದರ ಪರಿಸರದಲ್ಲಿ ಪ್ಯಾಕ್ ಮಾಡಿ ಸಿದ್ಧವಾಗುವ ನಮ್ಮ ನೀರು ಅಂತಾರಾಷ್ಟ್ರೀಯ ಮನ್ನಣೆ ಪಡೆಯುವ ಮೂಲಕ ಭಾರತಕ್ಕೂ ಹೆಮ್ಮೆ ಎನಿಸಿದೆ.

ಸದರಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ರಷ್ಯಾ, ಜರ್ಮನಿ, ಬಲ್ಗೇರಿಯಾ, ಅರ್ಜೆಂಟೀನಾ , ದೆಹಲಿ ಸೇರಿದಂತೆ ಜಗತ್ತಿನ ಪ್ರಮುಖ 2000ಕ್ಕೂ ಹೆಚ್ಚು ಬ್ರ್ಯಾಂಡ್‍ಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ನಮಗೆ ಕಂಚಿನ ಪದಕ ಸಿಕ್ಕಿರುವುದು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

Facebook Comments

Sri Raghav

Admin