ಕಾರಿಗಾಗಿ ಕೊಲೆ ಮಾಡಿದ್ದ ಕಿರಾತಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಫೆ.6- ಅಕ್ಕನ ಮದುವೆ ದಿನ ಮದುಮಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಕೆಂದುಕೊಂಡ ಸಹೋದರ ಬಾಡಿಗೆ ಕಾರನ್ನು ಅಪಹರಿಸಲು ಸಂಚು ರೂಪಿಸಿ ಚಾಲಕನ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅತ್ತಿಬೆಲೆ ನಿವಾಸಿ ವಿರೇಂದ್ರ (24) ಎಂಬುವನೇ ಬಂಧಿತ ಆರೋಪಿ.

ಘಟನೆ ವಿವರ: ಇದೇ ತಿಂಗಳು 16 ರಂದು ಅತ್ತಿಬೆಲೆಯಲ್ಲಿ ವಿರೇಂದ್ರನ ಅಕ್ಕನ ಮದುವೆ ಇತ್ತು. ಮದುವೆಯನ್ನು ಗ್ರಾಂಡ್ ಅಗಿ ಮಾಡಿ ನಂತರ ಅಕ್ಕ-ಭಾವನನ್ನು ವಿವಿಧ ದೇವಸ್ಥಾನಗಳಿಗೆ ಕರೆದು ಕೊಂಡು ಹೋಗುವ ಉದ್ದೇಶದಿಂದ ಕಾರನ್ನು ಬಾಡಿಗೆಗೆ ಪಡೆದು ನಂತರ ಚಾಲಕನನ್ನು ಕೊಲೆ ಮಾಡಿ ಕಾರನ್ನು ಅಪಹರಿಸಬಹುದೆಂದು ಸಂಚು ರೂಪಿಸಿದ್ದನು. ಅದರಂತೆ ಫೆ.2ರಂದು ರಾತ್ರಿ7.30ರಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋದ ವೀರೇಂದ್ರ ಬಾಡಿಗೆ ಕಾರನ್ನು ಮಾಡಿಕೊಂಡು ನೆಲಮಂಗಲ ಮೂಲಕ ತುಮಕೂರಿಗೆ ಹೋಗ ಬೇಕು ಎಂದು
ಬಂದಿದ್ದಾನೆ.

ಆ ಸಂದರ್ಭದಲ್ಲಿ ಚಾಲಕನನ್ನು ಕೊಲೆ ಮಾಡಿ ಕಾರು ಸಮೇತ ಪರಾರಿಯಾಗಲು ಮೊದಲೇ ಸಂಚು ರೂಪಿಸಿದ್ದನು. ನೆಲಮಂಗಲಕ್ಕೆ ಬರುವಾಗ ಪೊಲೀಸರು ಇವರ ವಾಹನವನ್ನು ತಪಾಸಣೆ ನಡೆಸಿದ್ದಾರೆ . ಆದ್ದರಿಂದ ಕೊಲೆಯ ಪ್ಲಾನ್ ಫೇಲಾಗಿದೆ. ನಂತರ ನೆಲಮಂಗಲದಲ್ಲಿ ಇರುವ ಸಂಗಮ ಹೋಟೆಲ್‍ನಲ್ಲಿ ಊಟ ಮಾಡಿ ದಾಬಸ್‍ಪೇಟೆಗೆ ಬಂದಿದ್ದು, ನಾವು ಮಧುಗಿರಿಗೆ ಹೋಗೋಣ ಎಂದು ವಿರೇಂದ್ರ ಕಾರಿನ ಚಾಲಕ ನಿಸಾರ್‍ಅಹಮದ್ (34)ಗೆ ಹೇಳಿದ್ದಾನೆ.

ನನಗೆ ಮಧುಗಿರಿ ಗೊತ್ತು ಬನ್ನಿ ಇಲ್ಲಿಂದ 54 ಕಿಲೋಮೀಟರ್ ಆಗುತ್ತದೆ ಎಂದು ರೂಟ್ ಮ್ಯಾಪ್ ಹಾಕಿ ಕೊಂಡು ಮಧುಗಿರಿ ಬೈಪಾಸ್ ಮೂಲಕ ಟೋಲ್ ಹತ್ತಿರ ಹೋಗಿದ್ದಾರೆ. ಅಲ್ಲಿಗೆ ಹೋದಾಗ ನಾವು ತುಂಬಾ ದೂರ ಬಂದಿದ್ದೇವೆ ಅಣ್ಣಾ ಎಂದು ಹೇಳಿ ವಾಪಸ್ ಕೊರಟಗೆರೆ ಬಳಿ ಇರುವ ತುಂಬಾಡಿಗೆ ಬಂದಿದ್ದಾರೆ. ಅಲ್ಲಿ ಸುಮಾರು 1 ಗಂಟೆ ಸಮಯ ಕಾರನ್ನು ನಿಲ್ಲಿಸಿ ಕಾಲ ಕಳೆದಿದ್ದಾರೆ. 11.30 ರಲ್ಲಿ ಇಲ್ಲಿಗೆ ನಮ್ಮ ಮಾವ ಬರುತ್ತಾರೆ. ನಿಮಗೆ ಬಾಡಿಗೆ ಕೊಟ್ಟು ಕಳುಹಿಸುತ್ತೇನೆ ಎಂದು ವಿರೇಂದ್ರ ಹೇಳಿದ್ದಾನೆ.

ಈತನ ಮಾತನ್ನು ನಂಬಿ ಕಾರನ್ನು ಮಧುಗಿರಿ ಮಾರ್ಗಕ್ಕೆ ತಿರುಗಿಸಿ ಅಲ್ಲಿಯೇ ನಿಲ್ಲಿಸಿದ್ದಾರೆ. ಬೇಜರು ಆಗುತ್ತಿದೆ. ಒಂದು ಫಿಲಂ ಹಾಕಣ್ಣ ಎಂದು ಹೇಳಿದಾಗ ಕಾಮಿಡಿ ಸೀರಿಯಲ್ ಹಾಕಿದ್ದ ಚಾಲಕ ತನ್ನ ಸೀಟನ್ನು ಹಿಂದಕ್ಕೆ ಬೆಂಡ್ ಮಾಡಿ ನಿದ್ರೆಗೆ ಜಾರಿದ್ದಾರೆ. ಇದೇ ಸಮಯವನ್ನು ಕಾಯುತ್ತಿದ್ದ ವಿರೇಂದ್ರ ತನ್ನ ಬ್ಯಾಗ್‍ನಲ್ಲಿ ಇದ್ದ ಚಾಕುವನ್ನು ತೆಗೆದು ಏಕಾಏಕಿ ಚಾಲಕನ ಎದೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟರಲ್ಲಿ ಈತ ಕಾರನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಅಲ್ಲಿಂದ ಪರಾರಿಯಾಗಿದ್ದ.

ಈ ಮಾರ್ಗದಲ್ಲಿ ಹೋಗುತ್ತಿದ್ದವರು. ಕಾರನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಚಾಲಕ ಕೊಲೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ ಅವರ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದರು.

ಇದರ ಅನ್ವಯ ಡಿವೈಎಸ್ಪಿ ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ನದಾಫ್ ಅವರ ನೇತೃತ್ವದಲ್ಲಿ ಸಬ್ ಇನ್ಸ್‍ಪೆಕ್ಟರ್‍ಗಳಾದ ನವೀನ್, ಮುತ್ತುರಾಜï, ಸಿಬ್ಬಂದಿಗಳಾದ ಮೋಹನ್, ವೆಂಕಟೇಶ್, ಪ್ರಸನ್ನ, ಸೋಮನಾಥ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು. ಕಾರು ಚಾಲಕನ ಕೊಲೆ ಆರೋಪಿ ಪತ್ತೆಗಾಗಿ ಬೆಂಗಳೂರು, ಚಿತ್ರದುರ್ಗ, ಗೋಪಾಲಹಳ್ಳಿ ಸೇರಿದಂತೆ ಇತರೆ ಕಡೆ ತೆರಳಿ ಹುಡುಕಾಟ ನಡೆಸಿ ಕಳೆದ ನದಾಪ್ ಅವರ ತಂಡಕ್ಕೆ ಆರೋಪಿ ವಿರೇಂದ್ರ ಸಿಕ್ಕಿ ಬಿದ್ದಿದ್ದಾನೆ.

ಆರೋಪಿಯನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ ವೇಳೆ ಕಾರಿಗಾಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ ಅವರು ವಿಷೇಷ ತಂಡದ ಕಾರ್ಯವೈಖರಿಗೆ ಅಭಿನಂದಿಸಿದ್ದಾರೆ.

Facebook Comments