ಡ್ರೋನ್ ಮೂಲಕ ಜಮೀನು ಸರ್ವೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ ; ಹತ್ತು ಮನೆಗಿಂತ ಹೆಚ್ಚು ಜನವಸತಿ ಇರುವ ಜಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಡ್ರೋಣ್ ಮೂಲಕ ಸರ್ವೆ ಕೆಲಸ ಮಾಡಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ತಿಳಿಸಿದ್ದಾರೆ. ಇದೊಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಆರ್‌ಡಿಪಿಆರ್ ಇಲಾಖೆ, ರೆವಿನ್ಯೂ ಇಲಾಖೆ, ಸರ್ವೆ ಆಫ್ ಇಂಡಿಯಾ ಮೂರು ಇಲಾಖೆಯ ಸಹಭಾಗಿತ್ವದೊಂದಿಗೆ ಹಾಸನದಲ್ಲಿ ಡ್ರೋಣ್ ಉಪಕರಣದ ಮೂಲಕ ಸರ್ವೆ ಕಾರ್ಯ ನಡೆಸಲಾಗುತ್ತಿದೆ.

ಡ್ರೋಣ್ ಮೂಲಕ ಜನವಸತಿ ಪ್ರದೇಶದ ಫೋಟೊಗ್ರಫಿಕ್ ಇಮೇಜ್ ತೆಗೆದುಕೊಂಡು ನಕ್ಷೆ ತಯಾರಿಸಲಾಗುತ್ತೆ. ನಂತರ ಪ್ರಾಪರ್ಟಿ ಕಾರ್ಡ್ ಜನರೇಟ್ ಮಾಡ್ತಾರೆ. ಅದನ್ನು ಜನಗಳಿಗೆ ನೀಡುತ್ತಾರೆ

ಪ್ರಾಪರ್ಟಿ ಕಾರ್ಡನ್ನು ವೆರಿಫಿಕೇಶನ್ ಮಾಡಿ ಏನಾದರು ಸಮಸ್ಯೆ ಇದ್ದರೆ ಸರಿಪಡಿಸಲಾಗುತ್ತೆ. ಇದರಿಂದಾಗಿ ಸಾರ್ವಜನಿಕರಿಗೆ ಅವರ ಒಡೆತನದ ನಕ್ಷೆ ಮತ್ತು ದಾಖಲಾತಿ ಒಂದೇ ಕಾರ್ಡ್‌ನಲ್ಲಿ ಸಿಗಲಿದೆ. ಇದರಿಂದ ವಿಭಾಗ ಮಾಡಿಕೊಳ್ಳುವಾಗ,

ಬ್ಯಾಂಕ್‌ ಲೋನ್ ಪಡೆಯುವಾಗ ಒಂದೇ ಕಾರ್ಡ್‌ನಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ಮನವಿ ಮಾಡಿದ್ದಾರೆ.

ಈ ಅತ್ಯಾಧುನಿಕ ಡ್ರೋಣ್ ಮೂಲಕ ದಿನಕ್ಕೆ 5 ರಿಂದ ಎಂಟು ಹಳ್ಳಿ ಸರ್ವೆ ಮಾಡಿ ಮುಗಿಸಬಹುದು. 10 ರಿಂದ 15 ದಿನದಲ್ಲಿ ಮಾಡಬಹುದಾದ ಕೆಲಸವನ್ನು ಡ್ರೋಣ್ ಮೂಲಕ ಕೇವಲ ಐದು ಗಂಟೆಯಲ್ಲಿ ಡ್ರೋಣ್ ಮೂಲಕ ಮಾಡಿ ಮುಗಿಸಬಹುದಾಗಿದೆ.

ಅರ್ಧ ಗಂಟೆಯಲ್ಲಿ ಸುಮಾರು 2 ಸಾವಿರ ಎಕರೆ ಸರ್ವೆ ಮಾಡಬಹುದಾಗಿದೆ. ಹವಾಮಾನ ವ್ಯತ್ಯಾಸ ಇದ್ದಾಗ ಡ್ರೋಣ್ ಹಾರಿಸಿ ಸರ್ವೆ ಮಾಡಲು ಸಾಧ್ಯ ಆಗಲ್ಲ. ಡ್ರೋಣ್ ಸರ್ವೆ ನಂತರ ಪಂಚಾಯಿತಿಯಲ್ಲಿರುವ ದಾಖಲೆ, ಆನ್‌ಗ್ರೌಂಡ್ ದಾಖಲೆ ಎಲ್ಲವನ್ನೂ ಪರಿಶೀಲನೆ ನಡೆಸಿ ನಂತರ ಪ್ರಾಪರ್ಟಿ ಕಾರ್ಡ್ ಇಷ್ಯೂ ಮಾಡಲಾಗುತ್ತೆ. ಹಾಸನದಲ್ಲಿ ಇನ್ನೂ ಐದಾರು ತಿಂಗಳು ಡ್ರೋಣ್ ಸರ್ವೆ ಕಾರ್ಯ ನಡೆಯಲಿದೆ ಎಂದು ಭೂದಾಖಲೆಗಳ ಉಪನಿರ್ದೇಶಕರು ಹೇಮಲತಾ ತಿಳಿಸಿದ್ದಾರೆ.

ಸಿ.ಬಿ.ಸಂತೋಷ್ …ಹಾಸನ

Facebook Comments

Sri Raghav

Admin