ರಣಜಿಗೂ ಬಂತೂ ಡಿಆರ್ಎಸ್ ಪದ್ಧತಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜು. 19- ಕ್ರಿಕೆಟ್‍ನಲ್ಲಿ ಆಗುವ ಕೆಲವು ತಪ್ಪುಗಳನ್ನು ಸರಿಪಡಿಸಿ ಕೊಳ್ಳಲು ಇರುವ ಡಿಆರ್‍ಎಸ್ ಪದ್ಧತಿಯು ರಣಜಿ ಪಂದ್ಯಾವಳಿಗೂ ಬಂದಿದೆ. ಕಳೆದ ಕೆಲವು ಋತುಗಳಿಂದ ರಣಜಿ ಪಂದ್ಯಾಗಳಲ್ಲಿ ಅಂಪೈರ್‍ಗಳು ನೀಡುವ ಕೆಲವು ತಪ್ಪು ತೀರ್ಮಾನಗಳಿಂದ ತಂಡಗಳು ಭಾರೀ ಬೆಲೆಯನ್ನು ತೆತ್ತಿರುವುದರಿಂದ ಮುಂಬರುವ ರಣಜಿ ಪಂದ್ಯಾವಳಿಗಳಲ್ಲಿ ಡಿಆರ್‍ಎಸ್ ಪದ್ಧತಿಯನ್ನು ಅಳವಡಿಸಲು ತೀರ್ಮಾನಿಸಲಾಗಿದೆ.

ಕಳೆದ ವರ್ಷ ರಣಜಿಯ ಸೆಮಿಪೈನಲ್‍ನಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಸೌರಾಷ್ಟ್ರದ ಭರವಸೆಯ ಆಟಗಾರ ಚೇತೇಶ್ವರ್ ಪೂಜಾರ್ ಔಟಾಗಿದ್ದರೂ ಕೂಡ ಅಂಪೈರ್ ನೀಡಿದ ತಪ್ಪು ನಿರ್ಣಯದಿಂದಾಗಿ ವಿನಯ್‍ಕುಮಾರ್ ಸಾರಥ್ಯದ ಕರ್ನಾಟಕ ತಂಡವು ಪೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿತ್ತು.

ರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಲು ಉತ್ತಮ ವೇದಿಕೆಯಲ್ಲಿ ರಣಜಿ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಅವಕಾಶಗಳಿದ್ದು ಅವರ ಸಾಮಥ್ರ್ಯವು ಕೆಲವು ಬಾರಿ ಕೆಟ್ಟ ತೀರ್ಪಿನಿಂದಾಗಿ ಕೈಚೆಲ್ಲಬೇಕಾಗುತ್ತದೆ.

ಈ ಬಾರಿಯ ರಣಜಿ ಪಂದ್ಯಾವಳಿಯನ್ನು ರೋಚಕ ಗೊಳಿಸಲು ಹಾಗೂ ಯುವ ಆಟಗಾರರನ್ನು ಹುರಿದುಂಬಿಸುವ ಸಲುವಾಗಿ ಸೀಮಿತ ಡಿಆರ್‍ಎಸ್ ಪದ್ಧತಿಯನ್ನು ಅಳವಡಿಸಲಾಗಿದೆ ಎಂದು ಬಿಸಿಸಿಐನ ವ್ಯವಸ್ಥಾಪಕ ನಿರ್ದೇಶಕ ಸಬಾ ಕರೀಂ ತಿಳಿಸಿದ್ದಾರೆ.

Facebook Comments