ಮತ್ತಿಬ್ಬರು ಡ್ರಗ್ಸ್ ಪೆಡ್ಲರ್‍ಗಳ ಬಂಧನ, 50 ಲಕ್ಷ ರೂ.ಬೆಲೆಯ ಮಾದಕ ವಸ್ತು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಮತ್ತಿಬ್ಬರು ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿ 50 ಲಕ್ಷ ರೂ.ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ರಾಹುಲ್ ಮತ್ತು ದರ್ಶನ್ ಎಂಬಿಬ್ಬರನ್ನು ಬಂಧಿಸಿ ಒಂದು ಸಾವಿರ ಎಲ್‍ಎಸ್‍ಡಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಇವರಿಬ್ಬರು ಡಾರ್ಕ್‍ನೆಟ್ ಮೂಲಕ ಪೊಲಾಂಡ್‍ನಿಂದ ಮಾದಕ ವಸ್ತು ಡ್ರಗ್ಸನ್ನು ಆಮದು ಮಾಡಿಕೊಂಡು ಪರಿಚಯಸ್ಥರಿಗೆ, ಸ್ನೇಹಿತರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಅಧಿಕ ಹಣಕ್ಕೆ ಮಾರುತ್ತಿದ್ದುದು ತನಿಖೆಯಿಂದ ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್‍ಪೆಕ್ಟರ್ ವಿರೂಪಾಕ್ಷಸ್ವಾಮಿ ಮತ್ತವರ ತಂಡ ಇವರಿಬ್ಬರನ್ನು ಬಂಧಿಸಿದ್ದು, ಅವರುಗಳ ಹಿನ್ನಲೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Facebook Comments