ಇಬ್ಬರು ಡ್ರಗ್ ಪೆಡ್ಲರ್‌ಗಳ ಸೆರೆ : 25 ಲಕ್ಷ ಮೌಲ್ಯದ ಮಾದಕವಸ್ತು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28- ನೈಜಿರಿಯಾ ಪ್ರಜೆ ಸೇರಿ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 25 ಲಕ್ಷ ಬೆಲೆಯ ಮಾದಕ ವಸ್ತು ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದ ಡಿಯೋಮ್ಯಾನ್‍ಡೆ (34) ಮತ್ತು ಕೇರಳ ಮೂಲದ ಕಣ್ಣೂರಿನ ನಿಸಾನ್ (35) ಬಂಧಿತರು. ಯಲಹಂಕದಲ್ಲಿ ಇಬ್ಬರೂ ಡ್ರಗ್ಸ್ ಪೆಡ್ಲರ್‍ಗಳು ಮಾದಕ ವಸ್ತು ಎಂಡಿಎಂಎ ಸಂಗ್ರಹಿಸಿಟ್ಟುಕೊಂಡು ಮಾರಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಇಬ್ಬರು ಡ್ರಗ್ ಪ್ಲೆಡರ್‍ಗಳನ್ನು ಬಂಧಿಸಿ 25 ಲಕ್ಷ ಬೆಲೆಯ 500 ಗ್ರಾಂ ಎಂಡಿಎಂಎ ಮಾದಕವಸ್ತು, 3 ಮೊಬೈಲ್, ತೂಕದ ಯಂತ್ರ ಮತ್ತು ಹೊಂಡಾ ಬೈಕ್ ವಶಪಡಿಸಿಕೊಂಡಿದ್ದಾರೆ.

ಇವರಿಬ್ಬರು ಹಲವು ವರ್ಷಗಳಿಂದ ನಗರದಲ್ಲಿ ವ್ಯವಸ್ಥಿತವಾಗಿ ಯುವಕರನ್ನೇ ಗುರಿಯಾಗಿರಿಸಿ ಕೊಂಡು ಮಾದಕವಸ್ತುವನ್ನು ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ಬಂಧಿತ ಇಬ್ಬರು ಡ್ರಗ್ ಪ್ಲೆಡರ್‍ಗಳನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

Facebook Comments