ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಪ್ರಿಂಟ್ ಡಿಸೈನರ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.25- ಐಷಾರಾಮಿ ಜೀವನಕ್ಕಾಗಿ ನಿಷೇತ ಮಾದಕ ವಸ್ತು ಅಫೀಮನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಪ್ರಿಂಟ್ ಡಿಸೈನರ್‍ನನ್ನು ಬಂಸಿರುವ ಹಲಸೂರು ಠಾಣೆ ಪೊಲೀಸರು 2.6 ಕೆಜಿ ಮಾದಕವನ್ನು ವಶಪಡಿಸಿಕೊಂಡಿದ್ದಾರೆ.

ಸೆ.20ರಂದು ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆಯ ಆಟದ ಮೈದಾನದ ಸಮೀಪ ರಾಜಸ್ತಾನ ಮೂಲದ ವ್ಯಕ್ತಿಯು ಮಾದಕವಸ್ತು ಅಫೀಮು ಮಾರಾಟದಲ್ಲಿ ತೊಡಗಿದ್ದಾನೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಇನ್ಸ್‍ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ಮಾಡಿ ಬಂಸಿದ್ದಾರೆ.

ಬುದ್ದಾರಾಮ್ ಬಂತ ಆರೋಪಿ. ಈತ ರಾಜಸ್ತಾನ ಮೂಲದವನು. ಈ ಹಿಂದೆ ನಗರದ ನಗರ್ತಪೇಟೆಯಲ್ಲಿ ಲಗ್ನ ಪತ್ರಿಕೆಗಳ ಪ್ರಿಂಟ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ರಾಜಸ್ತಾನದಿಂದ ಅಫೀಮನ್ನು ತಂದು ನಗರದಲ್ಲಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದುದ್ದು ವಿಚಾರಣೆ ವೇಳೆ ತಿಳಿದು ಬಂದಿದೆ.

ಆರೋಪಿಯು ಐಷಾರಾಮಿ ಜೀವನ ನಡೆಸಲು ಗಿರಾಕಿಗಳು ಮತ್ತು ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಾ ಸಮಾಜದ ಸ್ವಾಸ್ಥ್ಯ ಹಾಗೂ ಯುವ ಜನಾಂಗದ ಆರೋಗ್ಯವನ್ನು ಹಾಳು ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರ ನಿರ್ದೇಶನದಲ್ಲಿ ಹಲಸೂರು ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕುಮಾರ್ ಡಿ. ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments