ಮಾದಕ ವಸ್ತು ಪ್ರಕರಣ : ಬಿಜೆಪಿ ಮುಖಂಡನಿಗೆ ಸಮನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕೊತ್ತಾ, ಫೆ.23 (ಪಿಟಿಐ)- ಮಾದಕ ವಸ್ತು ವಶಪಡಿಸಿಕೊಳ್ಳುವ ಪ್ರಕರಣದ ತನಿಖೆಗೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಪಕ್ಷದ ಯುವ ವಿಭಾಗದ ಕಾರ್ಯಕರ್ತರೊಬ್ಬರು ಹಾಗೂ ಅವರ ಇಬ್ಬರು ಸಹಚರರನ್ನು ಕಳೆದ ವಾರ ಬಂಧಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾರಿ ತಪ್ಪಿಸಲು ಸಿಂಗ್ ಅವರು ಪಿತೂರಿ ನಡೆಸಿದ್ದಾರೆ ಎಂದು ಪಮೇಲಾ ಗೋ ಸ್ವಾಮಿ ಆರೋಪಿಸಿದ್ದಾರೆ. ಸಿಂಗ್ ಅವರು ಫೆ.23 ರಂದು ನಮ್ಮ ತನಿಖಾಧಿಕಾರಿಗಳು ಮುಂದೆ ಹಾಜರಾಗುವಂತೆ ಕೇಳಲಾಗಿದೆ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.

ಗೋಸ್ವಾಮಿ ಅವರು ಮಾದಕ ವಸ್ತು ವಶ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿದ್ದರಿಂದ, ಸಿಂಗ್ ಈ ಬಗ್ಗೆ ತನ್ನ ತನಿಖೆಯಲ್ಲಿ ಪೊಲೀಸರೊಂದಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತ ಸೌಮೆನ್ ಮಿತ್ರಾಗೆ ಪತ್ರ ಬರೆದಿದ್ದರು. ಕೊಲ್ಕತಾ ಪೊಲೀಸರ ವಶದಲ್ಲಿದ್ದಾಗ ಗೋಸ್ವಾಮಿ ಅವರು ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ ನಾನು ಸಂಬಂಧ ಹೊಂದಿದ್ದೇನೆಂದು ಆರೋಪಿಸಿದರೆ ಅವರ ವಿರುದ್ಧ ಬಲವಾದ ಮಾನಹಾನಿ ಮೊಕದ್ದಮೆ ಹೂಡಲು ಕಾನೂನುಬದ್ಧವಾಗಿ ಮುಂದುವರಿಯುವುದಾಗಿ ಎಂದು ಅವರು ತಮ್ಮ ಇಮೇಲ್‍ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅವರ ಸಹಚರರಾದ ಪ್ರಬೀರ್ ಕುಮಾರ್ ದೇ, ಹಾಗೂ ಅವರ ಪರ್ಸನಲ್ ಸೆಕ್ಯೂರಿಟಿ ಗಾರ್ಡ್ ಅವರನ್ನು ಪೊಲೀಸರು ಬಂಧಿಸಿದ್ದರು.
ಅದಕ್ಕೆ ಸಂಬಂಧಪಟ್ಟ ತನಿಖೆ ಕಾರ್ಯ ಇಂದು ಶುರುವಾಗಿದೆ. ಪ್ರಕರಣವನ್ನು ಕೊಲ್ಕತಾ ಪೊಲೀಸ್ ತನಿಖಾ ವಿಭಾಗ ತನಿಖೆಗೆ ತೆಗೆದುಕೊಂಡಿದೆ.

Facebook Comments