ಡ್ರಗ್ಸ್ ದಂಧೆಯಲ್ಲಿ ಇನ್ನೂ ಸಾಕಷ್ಟು ಪ್ರಭಾವಿಗಳಿದ್ದಾರೆ : ಇಂದ್ರಜಿತ್ ಲಂಕೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8- ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ಸಾಕಷ್ಟು ಪ್ರಭಾವಿಗಳಿದ್ದಾರೆ. ಇಂದಿಗೂ ಕೂಡ ಡ್ರಗ್ಸ್ ಪಾರ್ಟಿಗಳು ನಡೆಯುತ್ತಲೇ ಇವೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿದರು. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದ ಮೇಲೆ ಕೋಟ್ಯಂತರ ಮೌಲ್ಯದ ಡ್ರಗ್ಸ್‍ನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದರೆ ಅದರ ಬೇಡಿಕೆ ಮತ್ತು ಸರಬರಾಜು ಎಷ್ಟರ ಮಟ್ಟಿಗಿದೆ ಎಂಬುದು ಗೊತ್ತಾಗುತ್ತಿದೆ.

ಡ್ರಗ್ಸ್ ದಂಧೆ ಒಂಡೇ ಮ್ಯಾಚ್ ಅಲ್ಲ. ಇದು ನಿರಂತರವಾಗಿ ನಡೆಯುತ್ತಿರುವ ದೊಡ್ಡ ಪ್ರಕ್ರಿಯೆಯಾಗಿದೆ. ಇದರಲ್ಲಿ ಸಾಕಷ್ಟು ಪ್ರಭಾವಿಗಳಿದ್ದಾರೆ. ತನಿಖೆ ನಡೆಸುತ್ತಿರುವ ಸಿಸಿಬಿ ಮೇಲೆ ಒತ್ತಡವಿದೆ. ಇಂದಿಗೂ ಕೂಡ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿವೆ. ನಾನು ಹಿಂದೆ ಈ ಬಗ್ಗೆ ಹೇಳಿದಾಗ ಹಲವರು ಬೆನ್ನು ತಟ್ಟಿದ್ದರು ಮತ್ತೆ ಹಲವರು ಟೀಕಿಸಿದ್ದರು.

ಆದರೆ ಈಗ ಪೊಲೀಸರು ತನಿಖೆ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಅವರ ಕ್ರಮ ಅಭಿನಂದಿಸುತ್ತೇನೆ ಎಂದರು. ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವುದು ಬೇಡ. ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಹೇಳಿದರು.

2ನೆ ಕೋವಿಡ್ ಅಲೆ ನಂತರ ಮತ್ತೆ ಪಾರ್ಟಿ ನಡೆಯುತ್ತಿದೆ. ಡ್ರಗ್ಸ್ ವಿರುದ್ಧ ನಿರಂತರ ಕಾರ್ಯಾಚರಣೆ ಅಗತ್ಯ ಎಂದರು. ರಾಜ್ಯದ ಇತಿಹಾಸದಲ್ಲೇ ಇದೊಂದು ದೊಡ್ಡ ಸ್ಕ್ಯಾಂಡಲ್ ಎಂದು ವಿಷಾದಿಸಿದರು.

Facebook Comments