ಡ್ರಗ್ಸ್ ನಶೆಯಲ್ಲಿ ತೇಲಾಡುವ ಮತ್ತಷ್ಟು ನಟ-ನಟಿಯರ ಹೆಸರು ಬಾಯ್ಬಿಟ್ಟ ರಿಯಾ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.12-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆ ತೀವ್ರಗೊಂಡಷ್ಟು ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ಚಿತ್ರನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್ ತಾರೆ ಮತ್ತು ಹಿರಿಯ ಅಭಿನೇತ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುಭಾಷಾ ನಟಿ ರಾಕುಲ್ ಪ್ರೀತ್, ಚಿತ್ರ ನಿರ್ಮಾಪಕ ಮುಖೇಶ್ ಛಾಬ್ರಾ, ವಸ್ತ್ರ ವಿನ್ಯಾಸಕಿ ಸೈಮೋನೆ ಕಂಬಾಟಾ, ಸುಶಾಂತ್ ಗೆಳತಿ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಡ್ರಗ್ಸ್ ಸೇವಿಸಿದ್ದ ಸಂಗತಿಯನ್ನು ರಿಯಾ ಎನ್‍ಸಿಬಿ ಮುಂದೆ ಬಾಯಿಬಿಟ್ಟಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ವಿಚಾರಣೆಗೆ ಮುಂದಾಗಿದೆ.  ಈ ಮಧ್ಯೆ ಮುಂಬೈನ ಬೈಕುಲಾ ಜೈಲಿನ ಮಹಿಳಾ ಸೆರೆಮನೆಯಲ್ಲಿರುವ ರಿಯಾ ಚಕ್ರವರ್ತಿ ಫ್ಯಾನ್, ಹಾಸಿಗೆ ಮತ್ತಿತರ ಸೌಲಭ್ಯಗಳು ಇಲ್ಲದ ಬ್ಯಾರಕ್‍ನಲ್ಲಿ ಕಾಲ ಕಳೆಯುವಂತಾಗಿದೆ.

ರಿಯಾ ಮತ್ತು ಆಕೆಯ ಸಹೋದರ ಸೌವಿಕ್ ಚಕ್ರವರ್ತಿ ಅವರ ಜಾಮೀನು ಅರ್ಜಿಗಳನ್ನು ಮಂಬೈನ ವಿಶೇಷ ನ್ಯಾಯಾಲಯವೊಂದು ಇಂದು ಬೆಳಗ್ಗೆ ವಜಾಗೊಳಿಸಿದೆ. ರಿಯಾ, ಸೌಹಿಕ್ ಅವರಲ್ಲದೆ ಈ ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ)ಯಿಂದ ಈಗಾಗಲೇ ಬಂಧಿತರಾಗಿರುವ ಇತರ ನಾಲ್ವರ ಜಾಮೀನು ಅರ್ಜಿಗಳನ್ನೂ ಸಹ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಬಿ.ಗುರಾವ್ ತಿರಸ್ಕರಿಸಿದರು.

ಇದರಿಂದಾಗಿ ಆರೋಪಿಗಳು ಇನ್ನೂ ಕೆಲವು ದಿನಗಳ ಕಾಲ ನ್ಯಾಯಾಂಗ ಕಸ್ಟಡಿಯಲ್ಲಿ ಇರುವಂತಾಗಿದೆ.  ರಿಯಾ ಚಕ್ರವರ್ತಿ ಈಗ ಮುಂಬೈನ ಬೈಕುಲಾ ಜೂಲಿನ ಮಹಿಳಾ ಬ್ಯಾರಕ್‍ನಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ಧಾರೆ.

ಡ್ರಗ್ಸ್ ಖರೀದಿಸುತ್ತಿದ್ದ ಮತ್ತು ಅದನ್ನು ನಟ ಸುಶಾಂತ್ ಅವರಿಗೆ ಪೂರೈಸುತ್ತಿದ್ದ ಆರೋಪದ ಮೇಲೆ ಮೂರು ದಿನಗಳ ತೀವ್ರ ವಿಚಾರಣೆ ನಂತರ ಎನ್‍ಸಿಬಿ ಅಧಿಕಾರಿಗಳು ರಿಯಾ ಅವರನ್ನು ಬಂಧಿಸಿದರು. ಮುಂಬೈನ ನ್ಯಾಯಾಲಯವೊಂದು ಸೆ.22ರ ವರೆಗೆ 14 ದಿನಗಳ ಕಾಲ ಸುಶಾಂತ್ ಗೆಳತಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿತು.

Facebook Comments