ನಾಳೆ ‘ಮಾದಕ’ ನಟಿಯರ ಡೋಪಿಂಗ್ ಟೆಸ್ಟ್ ರಿಸಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಸ್ಯಾಂಡಲ್‍ವುಡ್‍ನ ಡ್ರಗ್ಸ್ ಜಾಲದ ಬಗ್ಗೆ ನಾಳೆ ಮಹತ್ವದ ತಿರುವು ಸಿಗಲಿದ್ದು, ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರ ಡೋಪಿಂಗ್ ಟೆಸ್ಟ್ ವರದಿ ನಾಳೆ ಬರಲಿದೆ.

ಡ್ರಗ್ಸ್ ಜಾಲದ ಸಂಪರ್ಕಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳಿಗೆ ಡೋಪಿಂಗ್ ಟೆಸ್ಟ್ ಮಾಡಿಸಿದ್ದಾರೆ.

ನಟಿ ಸಂಜನಾ ಮತ್ತು ರಾಗಿಣಿ ಡೋಪಿಂಗ್ ಟೆಸ್ಟ್‍ಗೆ ಒಳಗಾಗಲು ತಕರಾರು ತೆಗೆದಿದ್ದು, ಸಂಜನಾ ಅವರಂತೂ ನ್ಯಾಯಾಲಯದ ಆದೇಶ ತೋರಿಸಿದರೂ ಕೂಡ ಪರೀಕ್ಷೆಗೆ ಒಳಗಾಗದೆ ವಿರೋಧ ವ್ಯಕ್ತಪಡಿಸಿದರು. ರಾಗಿಣಿ ಪರೀಕ್ಷೆಗೆ ಮೂತ್ರದ ಬದಲಾಗಿ ನೀರನ್ನು ತುಂಬಿಕೊಂಡು ದಾರಿ ತಪ್ಪಿಸುವ ಪ್ರಯತ್ನ ಮಾಡಿದರು. ಕೊನೆಗೂ ಪೆಪೊಲೀಸರು ಸ್ಯಾಂಪಲ್ ಪಡೆದು ಡೋಪಿಂಗ್ ಟೆಸ್ಟ್‍ಗೆ ಒಳಪಡಿಸಿದ್ದಾರೆ.

ಇದರ ವರದಿ ನಾಳೆ ಬರುವ ಸಾಧ್ಯತೆ ಇದೆ. ಡೋಪಿಂಗ್ ಟೆಸ್ಟ್‍ನಲ್ಲಿ ಮಾದಕ ವಸ್ತು ಸೇವಿಸಿರುವುದು ಖಚಿತವಾದರೆ ಇಬ್ಬರು ನಟಿಯರು ಸೇರಿದಂತೆ ಆರೋಪಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಲಿದೆ.

ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆ ಪ್ರಕಾರ, ಮಾದಕ ವಸ್ತು ಸೇವನೆ, ಮಾರಾಟ ಸರಬರಾಜು ಅಪರಾಧವಾಗಿದೆ. ಈ ನಟಿಯರು ಮಾರಾಟ, ದಾಸ್ತಾನು ವಿಷಯವಾಗಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ. ಆದರೆ ಸೇವನೆ ಖಚಿತ ಎಂದಾದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ.

Facebook Comments