ಇಬ್ಬರು ಗಾಂಜಾ ಪೆಡ್ಲರ್ ಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14-ಕುಖ್ಯಾತ ಅಂತರ್ ರಾಜ್ಯ ಇಬ್ಬರು ಗಾಂಜಾ ಪೆಡ್ಲರ್‍ಗಳನ್ನು ದಕ್ಷಿಣ ವಿಭಾಗದ ಕೋಣನ ಕುಂಟೆ ಠಾಣೆ ಪೊಲೀಸರು ಬಂಧಿಸಿ 25 ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಬಂಟುತಾತಾರಾಂ(41), ಚಾಮರಾಜನಗರ ಜಿಲ್ಲೆಯ ಸುರೇಶ್(30) ಬಂಧಿತರು. ನಿನ್ನೆ ಮಧ್ಯಾಹ್ನ 1.25ರ ಸುಮಾರಿನಲ್ಲಿ ಜೆ.ಪಿ.ನಗರ 8ನೇ ಹಂತ, ಕೊತ್ತನೂರು, 80ಅಡಿ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಕೋಣನಕುಂಟೆ ಠಾಣೆ ಇನ್ಸ್‍ಪೆಕ್ಟರ್ ಧರ್ಮೇಂದ್ರ ಅವರು, ಸಿಬ್ಬಂದಿಯೊಂದಿಗೆ ತೆರಳಿ ಸುರೇಶ್ ಎಂಬಾತನನ್ನು ಬಂಧಿಸಿ ಮೊಬೈಲ್ ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಈತನನ್ನು ವಿಚಾರಣೆಗೆ ಒಳಪಡಿಸಿ ಈತ ನೀಡಿದ ಹೇಳಿಕೆ ಮೇರೆಗೆ ಜೆಪಿ ನಗರ 8ನೆ ಹಂತದಲ್ಲಿ ದಾಸ್ತಾನು ಮಾಡಲಾಗಿದ್ದ ಗಾಂಜಾವನ್ನು ವಶಪಡಿಸಿಕೊಂಡು ಆಂಧ್ರಪ್ರದೇಶ ಮೂಲದ ಬಂಟುತಾತಾರಾಂನನ್ನು ಬಂಧಿಸಿದ್ದಾರೆ.

ಈ ಪ್ರಕರಣದಿಂದ ಆರೋಪಿಗಳು ಆಂಧ್ರಪ್ರದೇಶದ ವಿಶಾಖ ಪಟ್ಟಣದಿಂದ ಮಾದಕ ವಸ್ತು ಗಾಂಜಾವನ್ನು ತಂದು ನಗರದ ಟೆಕ್ಕಿಗಳಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.

Facebook Comments