ವಿದೇಶಿ ಪ್ರಜೆ ಸೆರೆ, 6 ಕೆಜಿ ಡ್ರಗ್ಸ್ ವಶ..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.24- ಅಪಾಯಕಾರಿ ಯಾದ 6.8 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಎನ್‍ಸಿಬಿ ಅಧಿಕಾರಿಗಳು ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ವರನ್ನು ಬಂಸಿದ್ದಾರೆ. ಕಳೆದ ನ.11ರಂದು ಸಿಕ್ಕ ಖಚಿತ ಮಾಹಿತಿ ಆಧರಿಸಿ ಬೆಂಗಳೂರು ವಲಯದ ಮಾದಕವಸ್ತು ನಿಯಂತ್ರಣ ದಳ( ಎನ್‍ಸಿಬಿ) ಅಧಿಕಾರಿಗಳು ಅಮೃತಹಳ್ಳಿಯಲ್ಲಿ ಕಾರ್ಯಾಚರಣೆ ಕೈಗೊಂಡಾಗ 6.870 ಕೆಜಿ ಸೂಡೋಫ್ರಿನ್ ಎಂಬ ಮಾದಕವಸ್ತು ಪತ್ತೆಯಾಗಿದೆ.

ಈ ಸಂಬಂಧಪಟ್ಟಂತೆ ಬೆಂಗಳೂರಿನ ನಿವಾಸಿಗಳಾದ ಡಿ.ಶುಕ್ಲಾ, ಜಿ.ಮರಿಯಾ ಎಂಬಿಬ್ಬರನ್ನು ಬಂಸಲಾಗಿದ್ದು, ಮಾದಕ ವಸ್ತು ಸಾಗಾಣಿಕೆಯ ಪ್ರಮುಖ ವ್ಯಕ್ತಿಗಳಾದ ಬಿ.ಒನೊವೊ, ಸಿ.ಒಕ್ವಾರ್ ಅವರುಗಳನ್ನು ಬಂಸಿದ್ದಾರೆ. ಒನೊವೊ ಮತ್ತು ಒಕ್ವಾರ್ ನೈಜೀರಿಯಾ ಪ್ರಜೆಗಳಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದರು.

ಎಫೆಡ್ರಿನ್ ಮತ್ತು ಸೂಡೋ ಎಫೇಡ್ರಿನ್ ರಾಸಾಯನಿಕಗಳನ್ನು ಬಟ್ಟೆ ಒಗೆಯುವ ಸೋಪು, ಸುಗಂಧದ್ರವ್ಯ, ಬಣ್ಣಗಳ ಉತ್ಪಾದನೆ ವೇಳೆ ಬಳಕೆ ಮಾಡಲಾಗುತ್ತದೆ. ಸಂಸ್ಕರಿತ ರೂಪದ ಇದನ್ನು ಕೇಂದ್ರ ನರಮಂಡಲದ ಉತ್ತೇಜನಕಾರಿ ಔಷಯಾಗಿಯೂ ಬಳಕೆ ಮಾಡಲಾಗುತ್ತದೆ.

ಇದು ವೈದ್ಯರ ಅಥವಾ ತಜ್ಞರ ಶಿಫಾರಸು ಇಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ. ಮಿತಿ ಮೀರಿ ಇದನ್ನು ಬಳಕೆ ಮಾಡಿದರೆ ಪ್ರಾಣ ಹಾನಿಯಾಗುವ ಅಪಾಯವಿದೆ. ಇಂತಹ ಮಾರಕವಾದ ಔಷಯನ್ನು ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ.

ಬೆಂಗಳೂರಿನ ಅಮೃತ್‍ಹಳ್ಳಿಯಲ್ಲಿ ಮಕ್ಕಳ ಬ್ಯಾಗ್‍ನೊಳಗೆ ಅಡಗಿಸಿಟ್ಟು ಮಾದಕವಸ್ತುವನ್ನು ಸಾಗಾಣಿಕೆ ಮಾಡಿರುವುದು ತಿಳಿದುಬಂದಿದೆ.
ಎನ್‍ಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

Facebook Comments