ಶೃಂಗೇರಿ ಶಾಸಕ ಡಿ.ಟಿ.ರಾಜೇಗೌಡ ಅವರಿಗೂ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.9- ಮಲೆನಾಡು ಜನಪ್ರತಿನಿಧಿಗಳಿಗೆ ಕೊರೊನಾ ವಕ್ಕರಿಸುತ್ತಿರು ವುದು ಮುಂದುವರಿದಿದ್ದು, ಇಂದು ಶೃಂಗೇರಿ ಶಾಸಕ ಡಿ.ಟಿ.ರಾಜೇಗೌಡ ಅವರಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಈಗಾಗಲೇ ಬಿಜೆಪಿಯ ಪ್ರಾಣೇಶ್, ಜೆಡಿಎಸ್‍ನ ಭೋಜೇಗೌಡರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟು ಅವರು ಚಿಕಿತ್ಸೆಗೆ ದಾಖಲಾದ ಬೆನ್ನಲ್ಲೇ ಶೃಂಗೇರಿ ಶಾಸಕ ರಾಜೇಗೌಡ ಅವರು ಕೊರೊನಾ ಸೋಂಕಿತರಾಗಿದ್ದು, ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನಪ್ರತಿನಿಧಿಗಳು ಜನರ ಒಡನಾಟದಲ್ಲೇ ಇರುತ್ತಾರೆ. ಯಾರಿಗೆ ಸೋಂಕಿರುತ್ತದೆ, ಯಾರ ಸಂಪರ್ಕದಿಂದ ಸೋಂಕು ತಗುಲುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಸಂಪರ್ಕದಲ್ಲಿರುವವರಿಗೆ ಸೋಂಕು ತಗುಲಿದಾಗ, ತಾವು ತಪಾಸಣೆಗೊಳಪಟ್ಟಾಗ ಸೋಂಕಿರುವುದು ಗೊತ್ತಾಗುತ್ತಿದೆ.

ಸದ್ಯ ಈಗ ಶೃಂಗೇರಿ ಶಾಸಕರಿಗೆ ಕೊರೊನಾ ಸೋಂಕಿರುವುದು ಗೊತ್ತಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಪರ್ಕಿತರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

Facebook Comments