ದುನಿಯಾ ವಿಜಿಗೆ ನಿರೀಕ್ಷಣ ಜಾಮೀನು ಮಂಜೂರು

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay

ಬೆಂಗಳೂರು. ಜೂ.08 : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದಲ್ಲಿ ನಟ ದುನಿಯಾ ವಿಜಿಗೆ ನಿರೀಕ್ಷಣ ಜಾಮೀನು ದೊರೆತಿದೆ. ನಿರೀಕ್ಷಣಾ ಜಾಮೀನು ನೀಡಿರುವ ಬೆಂಗಳೂರಿನ 65ನೇ ಸೆಷನ್ಸ್ ಕೋರ್ಟ್ ಒಂದು ಲಕ್ಷ ರೂ. ಬಾಂಡ್ ಹಾಗೂ ಸಾಕ್ಷಿ ನಾಶಪಡಸದಂತೆ ಷರತ್ತು ವಿಧಿಸಿದೆ. ನ್ಯಾಯಾಲಯ ನೀಡಿರುವ ಅದೇಶದಕಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಕೂಡಲೇ ಸಹಿ ಮಾಡಿಸಿ ದುನಿಯಾ ವಿಜಿ ಬಿಡುಗಡೆಗೊಳಿಸಬೇಕು. ದುನಿಯಾ ವಿಜಯ್ ಬಂಧನವಾಗಿದ್ದರೂ ಬಿಡುಗಡೆಗೊಳಿಸುವಂತೆ ಕೋರ್ಟ್ ಆದೇಶಿಸಿದೆ. ಒಬ್ಬರು ಸಬ್ ಇನ್ಸ್ ಪೆಕ್ಟರ್ ಹಾಗು ನಾಲ್ಕು ಜನ ಸಿಬ್ಬಂದಿ ದುನಿಯಾ ವಿಜಿಯನ್ನು ಇನ್ನೋವಾ ಕಾರಿನಲ್ಲಿ ತಮಿಳುನಾಡಿನಿಂದ ಕರೆತರುತ್ತಿದ್ದಾರೆ. ಸದ್ಯ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷೆನ್ 353 ಹಾಗೂ 225 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin