ಡಿಸಿಪಿ ಅಣ್ಣಾಮಲೈ ಮುಂದೆ ವಿಜಿ ಹಾಜರ್

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay--01

ಬೆಂಗಳೂರು, ನ.7- ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರ ಮುಂದೆ ನಟ ದುನಿಯಾ ವಿಜಯ್ ಇಂದು ಹಾಜರಾದರು. ಗಿರಿನಗರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಪತ್ನಿ ಕೀರ್ತಿಗೌಡ ಹಾಗೂ ಇವರ ತಂದೆ-ತಾಯಿಯೊಂದಿಗೆ ದುನಿಯಾ ವಿಜಯ್ ಇಂದು ಬೆಳಗ್ಗೆ ಡಿಸಿಪಿ ಅವರ ಕಚೇರಿಗೆ ತೆರಳಿ ಅಣ್ಣಾಮಲೈ ಎದುರು ಹಾಜರಾದರು. ಈ ವೇಳೆ ಡಿಸಿಪಿ ಅವರು ದುನಿಯಾ ವಿಜಯ್‍ಗೆ ಯಾವುದೇ ಗಲಾಟೆ ಮಾಡಬಾರದು. ಕಾನೂನಿಗಾಗಲಿ ಹಾಗೂ ಸಾರ್ವಜನಿಕರಿಗಾಗಲಿ ಧಕ್ಕೆ ತರುವಂತಹ ಕೆಲಸ ಮಾಡಬಾರದೆಂದು ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

ದುನಿಯಾ ವಿಜಯ್ ಕುಟುಂಬದವರು ಪದೇಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದಲ್ಲದೇ ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು ವಿಜಯ್ ಹಾಗೂ ಪತ್ನಿ ನಾಗರತ್ನ, ಕೀರ್ತಿಗೌಡ ಸೇರಿದಂತೆ ಏಳುಮಂದಿಗೆ 107 ಸೆಕ್ಷನ್ ಹಾಕಲಾಗಿತ್ತು. ಈ ಕುರಿತು ಡಿಸಿಪಿ ಅಣ್ಣಾಮಲೈ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿತ್ತು.

ಇದೀಗ ವಿಚಾರಣೆಗೆ ಹಾಜರಾದ ವಿಜಯ್ ಅವರನ್ನು ವಿಚಾರಣೆ ನಡೆಸಿದ ಅಣ್ಣಾಮಲೈ ಇದು ಬೆಂಗಳೂರು ಅಥವಾ ಸಾರ್ವಜನಿಕ ಸಮಸ್ಯೆ ಅಲ್ಲ. ಹೀಗಾಗಿ ದುನಿಯಾ ವಿಜಯ್ ವಿಷಯವಾಗಿ ನಾನು ಮಾತನಾಡುವುದಿಲ್ಲ. ದುನಿಯಾ ವಿಜಿಯಿಂದ 5 ಲಕ್ಷ ಶ್ಯೂರಿಟಿಯನ್ನ ಬರೆಸಿಕೊಂಡಿದ್ದೀನಿ. ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿದ್ದಾರೆ. ಅವರ ಅಪ್ಪ ಅಮ್ಮನಿಗೆ ವಯಸ್ಸಾಗಿದೆ. ಹೀಗಾಗಿ ಜಸ್ಟ್ ವಾರ್ನಿಂಗ್ ಮಾಡಿದ್ದೇನೆ ಅಷ್ಟೇ ಎಂದರು.

Facebook Comments