‘ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು’

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಮೇ 27- ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡು ಎಲ್ಲರೂ ಕೇಳಿರುತ್ತಿರಾ ಆದರೆ ಅದು ಸಿನಿಮಾ ಆಗಿತ್ತು. ಈಗ ನಾವು ಹೇಳುತ್ತಿರುವ ವಿಷಯ ನಿಜ ಜೀವನದ್ದು ಹೆಣ್ಣು ಮಗಳೊಬ್ಬಳು ಕಂಠಪೂರ್ತಿ ಕುಡಿದು ರಾದ್ಧಾಂತ ಮಾಡಿರುವ ಘಟನೆ ಇಲ್ಲಿ ನಡೆದಿದೆ.

ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಬಾರ್‍ವೊಂದರ ಮುಂಭಾಗ ಈ ಘಟನೆ ನಡೆದಿದ್ದು, ಮಧ್ಯಪಾನದ ನಶೆಯಲ್ಲಿ ಆಕೆ ಬಾರ್‍ಗೆ ಬಂದ ಗ್ರಾಹಕರಿಗೆ ಬಾಯಿಗೆ ಬಂದಂತೆ ಬೈದು, ಹೈಡ್ರಾಮಾ ಸೃಷ್ಟಿಸಿದ್ದಳು.

ಇದರಿಂದ ಗಾಬರಿಗೊಂಡ ಬಾರ್ ಮಾಲೀಕ ಈಕೆಯನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಲು ಪ್ರಯತ್ನಪಟ್ಟರೂ ಪಟ್ಟು ಬಿಡದ ಯುವತಿ ಅವರಿಗೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ.

ಇನ್ನು ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಕೆಲವರು ಪೊಲೀಸರಿಗೆ ಕರೆ ಮಾಡಿದ್ದಾರೆ.ಪೊಲೀಸರ ಮುಂದೆಯೂ ಆಕೆ ಗಂಡಸರಿಗೆ ಕಂಠಪೂರ್ತಿ ಕುಡಿಸಿ ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುತ್ತಾರೆ. ಅದನ್ನು ತಡೆಯದೆ ನೀವು ನನ್ನನ್ನು ಬಂಧಿಸಲು ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾಳೆ.

ಕೊನೆಗೆ ಮಹಿಳಾ ಪೇದೆಗಳನ್ನು ಹಿಡಿದು ಎಳೆದು ಜೀಪ್‍ನಲ್ಲಿ ಠಾಣೆಗೆ ಕರೆದೊಯ್ದು, ನಂತರ ನಶೆ ಇಳಿದ ಮೇಲೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.
ಸದ್ಯ ಕುಡಿದ ಗಲಾಟೆ ಮಾಡುತ್ತಿದ್ದ ಯುವತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ