ದುರ್ಗಾ ಪೂಜೆಯಂದು ರಾತ್ರಿ ಕಫ್ರ್ಯೂ

ಈ ಸುದ್ದಿಯನ್ನು ಶೇರ್ ಮಾಡಿ

ಅಗರ್ತಲ,ಸೆ.5- ಮುಂಬರುವ ದುರ್ಗಾ ಪೂಜೆಗೆ ಒಟ್ಟು 29 ಮಾರ್ಗಸೂಚಿಗಳನ್ನು ಸೇರಿಸಿ ಅಧಿಸೂಚನೆ ಹೊರಡಿಸಿರುವ ತ್ರಿಪುರ ಸರ್ಕಾರ, ಹಬ್ಬದ ದಿನ ರಾತ್ರಿ ಕಫ್ರ್ಯೂ ವಿಧಿಸಲಾಗಿದೆ ಎಂದು ತಿಳಿಸಿದೆ.  ಮಾರ್ಗಸೂಚಿಗಳ ಪ್ರಕಾರ, ದುರ್ಗಾ ಪೂಜಾ ಸಂಘಟಕರು ದೇಣಿಗೆ ಬಯಸುವ ಯಾವುದೇ ಮನೆಗೆ ಭೇಟಿ ನೀಡುವಂತಿಲ್ಲ ಮತ್ತು ಅವರು ವಿವಿಧ ಆನ್‍ಲೈನ್ ವಹಿವಾಟು ವೇದಿಕೆಗಳ ಮೂಲಕ ಮಾತ್ರ ದೇಣಿಗೆ ಸಂಗ್ರಹಿಸಬಹುದು.

ದುರ್ಗಾ ವಿಗ್ರಹದ ಗರಿಷ್ಠ ಎತ್ತರವು 10 ಅಡಿಗಳಿಗಿಂತ ಹೆಚ್ಚಿರಬಾರದು, ಪೂಜಾ ಸಮಿತಿಗಳು ಕಿರಿದಾದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಅನುಮತಿಸಲು ಅವಕಾಶವಿಲ್ಲ ಮತ್ತು ದೇವಿ ದರ್ಶನವನ್ನು ದೂರದಿಂದ ನೋಡುವ ರೀತಿಯಲ್ಲಿ ಪೆಂಡಲ್‍ಗಳನ್ನು ಹಾಕಬೇಕು.

ಪೂಜಾ ಸಮಯದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ. ಹೆಚ್ಚುವರಿ ದೀಪಗಳನ್ನು ಅಳವಡಿಸವಂತಿಲ್ಲ, ಥರ್ಮಲ್ ಸ್ಕ್ರೀನಿಂಗ್ ನ್ನು ಪೆಂಡಾಲ್‍ಗಳ ಮುಂದೆ ಜೋಡಿಸಬೇಕು ಮತ್ತು ಅಗತ್ಯಬಿದ್ದರೆ, ದೊಡ್ಡ ಟಿವಿ ಅಥವಾ ಎಲ್‍ಇಡಿ ಸ್ಕ್ರೀನಿಂಗ್‍ನ್ನು ವ್ಯವಸ್ಥೆಗೊಳಿಸಬೇಕು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪೂಜಾ ಹಬ್ಬದ ವ್ಯವಸ್ಥೆ, ಬಹುಮಾನ ವಿತರಣೆಯನ್ನು ನಿಲ್ಲಿಸಬೇಕು ಮತ್ತು 30ಕ್ಕೂ ಹೆಚ್ಚು ಜನರು ವಿಗ್ರಹ ವಿರ್ಸಜನೆಗೆ ಹೋಗುವಂತಿಲ್ಲ ಎಂದು ಸೂಚಿಸಿದೆ.  25 ದುರ್ಗಾ ಪೂಜಾ ಸಂಘಟಕರಿಗೆ ಮತ್ತು 4 ಸಾಮಾನ್ಯವಾಗಿ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಸಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ.

Facebook Comments