ಬಾಕ್ಸರ್ ದುರ್ಯೋಧನ ಸಿಂಗ್‍ಗೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.30- ವಿಶ್ವ ಬಾಕ್ಸಿಂಗ್ ಶಿಫ್‍ನ ವಿಜೇತ ಬಾಕ್ಸರ್ ದುರ್ಯೋಧನಸಿಂಗ್ ನೇಗಿಗೆ ಕೊರೊನಾ ದೃಢಪಟ್ಟಿರುವುದರಿಂದ ಅವರನ್ನು ಚಿಕಿತ್ಸೆಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬರುವ ಒಲಿಂಪಿಕ್ಸ್‍ಗಾಗಿ ತಯಾರಿಯಲ್ಲಿ ತೊಡಗಿರುವ ನೇಗಿಗೆ ಕೊರೊನಾ ಕಾಣಿಸಿಕೊಂಡಿರುವುದರಿಂದ ಅವರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಕುಸ್ತಿಪಟು ಗುರುಪ್ರೀತ್‍ಸಿಂಗ್ ಹಾಗೂ ಕುಸ್ತಿ ತಂಡದ ಫಿಸಿಯೋ ವಿನೋದ್‍ರೈಗೂ ಕೊರೊನಾ ಕಾಣಿಸಿಕೊಂಡಿದ್ದು ಅವರನ್ನು ಮಹಾವೀರ್‍ದಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಸಾಯ್ ಹೇಳಿದೆ.

Facebook Comments