100 ಮೀ ಓಟದಲ್ಲಿ ದ್ಯುತಿಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

ನಪೊಲಿ(ಇಟಲಿ), ಜು.10- ಇಟಲಿಯ ನಪೊಲಿ ನಗರದಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಯಡ್ ಕ್ರೀಡಾಕೂಟದ 100ಮೀಟರ್ ಓಟ ಸ್ಪರ್ಧೆಯಲ್ಲಿ ಭಾರತದ ಹೆಮ್ಮೆಯ ಅಥ್ಲೆಟ್ ದ್ಯುತಿ ಚಂದ್ ಚಿನ್ನ ಗೆದ್ದಿದ್ದಾರೆ.  ರಾಷ್ಟ್ರೀಯ ದಾಖಲೆ ಹೆಗ್ಗಳಿಕೆಯ ಟ್ರ್ಯಾಕ್ ಅಂಡ್ ಫೀಲ್ಡ್ ಪಟು ಈ ಮೂಲಕ ವಲ್ರ್ಡ್ ಯೂನಿವರ್ಸಿಯಡ್‍ನಲ್ಲಿ ಬಂಗಾರದ ಸಾಧನೆ ಮಾಡಿದ ಭಾರತದ ಪ್ರಥಮ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

23 ವರ್ಷದ ದ್ಯುತಿ 100 ಮೀಟರ್ ಓಟದ ಸ್ಪರ್ಧೆಯ ಆರಂಭದಿಂದಲೂ ಅಂತದ್ಯವರೆಗೂ ಮುನ್ನಡೆ ಸಾಧಿಸಿ 11.32 ಸೆಕೆಂಡ್‍ಗಳಲ್ಲಿ ಮೊದಲಿಗರಾಗಿ ಗೆಲುವಿನ ಗೆರೆ ದಾಟಿದರು.  ಲೇನ್ ನಂ.4ರಲ್ಲಿ ಓಡಿದ ದ್ಯುತಿ ಸ್ಪರ್ಧೆಯಲ್ಲಿದ್ದ ಎಲ್ಲ ಎಂಟು ಅಥ್ಲೆಟ್‍ಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದರು.

ಸ್ವಿಟ್ಜರ್‍ಲೆಂಟ್‍ನ ಡೆಲ್ ಪೊಂಟೆ ದ್ವಿತೀಯ ಸ್ಥಾನ (11.33 ಸೆಕೆಂಡ್‍ಗಳು) ಹಾಗೂ ಜರ್ಮನಿಯ ಲಿಸಾ ಕಾಯ್ವೀ (11.39 ಸೆಕೆಂಡ್‍ಗಳು) ತೃತೀಯ ಸ್ಥಾನಗಳೊಂದಿಗೆ ಅನುಕ್ರಮವಾಗಿ ರಜತ ಮತ್ತು ಕಂಚು ಪದಕ ಗೆದ್ದರು.

ಒಡಿಶಾ ಓಟಗಾರ್ತಿ 11.24 ಸೆಕೆಂಡ್‍ಗಳೊಂದಿಗೆ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದಾರೆ. ನಪೊಲಿಯಲ್ಲಿ ಹೊಸ ಸಾಧನೆಯಿಂದ ಜಾಗತಿಕ ಸ್ಪರ್ಧೆಯ 199ಮೀಟರ್ ಓಟದಲ್ಲಿ ಸ್ವರ್ಣ ಸಾಧನೆ ಮಾಡಿದ ಭಾರತದ ಪ್ರಥಮ ಪಟು ಎಂಬ ಕೀರ್ತಿಗೂ ಪಾತ್ರರಾದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ