ವಿಶ್ವ ಅಥ್ಲೆಟಿಕ್ಸ್ ಆರಂಭಿಕ ಸುತ್ತಿನಲ್ಲೇ ಧುತಿಚಂದ್‍ಗೆ ನಿರಾಸೆ

ಈ ಸುದ್ದಿಯನ್ನು ಶೇರ್ ಮಾಡಿ

ಧೋಹಾ – ಇಲ್ಲಿ ನಡೆಯುತ್ತಿರುವ 17ನೆ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಮಹಿಳೆಯರ 100ನೆ ಮೀಟರ್ ಆರಂಭಿಕ ಸುತ್ತಿನಲ್ಲಿ ಭಾರತದ ಧುತಿಚಂದ್ ನಿರಾಸೆ ಅನುಭವಿಸಿದ್ದಾರೆ.  ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ಗೆಲುವಿನ ಗುರಿಯನ್ನು 11.15 ಸೆಕೆಂಡ್‍ಗಳಲ್ಲಿ ಮುಟ್ಟಬೇಕಾಗಿತ್ತು, ಆದರೆ ಧುತಿ 11.48 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟುವ ಮೂಲಕ 7ನೆ ಸ್ಥಾನಿಯಾದರು.

ಇದರಿಂದ ಮುಂದಿನ ವರ್ಷ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವಲ್ಲೂ ಧುತಿ ಹಿನ್ನೆಡೆ ಅನುಭವಿಸಿದ್ದಾರೆ. ಕಳೆದ ಜುಲೈನಲ್ಲಿ ವಿಶ್ವ ಯುನಿವರ್ಸಿಟಿ ಗೇಮ್ಸ್‍ನ 100 ಮೀಟರ್ ಓಟದಲ್ಲಿ ಮೊದಲ ಚಿನ್ನ ಗೆದ್ದ ಭಾರತೀಯ ವೇಗದ ಓಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದ ಧುತಿ ಜರ್ಕತಾದಲ್ಲಿ ನಡೆದ ಏಷ್ಯಾನ್ ಗೇಮ್ಸ್‍ನ ಮಹಿಳೆಯರ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.

ಭಾರತದವರೇ ಆದ ಎಂ.ಪಿ.ಜಬ್ಬೀರ್ ಪುರುಷರ 400 ಮೀಟರ್ ಹಾರ್ಡಲ್ಸ್‍ನ ಸೆಮಿಫೈನಲ್‍ನಲ್ಲಿ 5ನೆ ಸ್ಥಾನ ಪಡೆದು ಫೈನಲ್‍ಗೇರುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಏಷ್ಯಾನ್ ಗೇಮ್ಸ್‍ನ ಕಂಚಿನ ಪದಕ ವಿಜೇತ ಎಂ.ಪಿ.ಜಬ್ಬೀರ್ 49.62 ಸೆಕೆಂಡ್‍ನಲ್ಲಿ ಗುರಿಯನ್ನು ಮುಟ್ಟುವ ಮೂಲಕ 3ನೇ ಸ್ಥಾನಿಯಾಗಿ ಸೆಮಿಫೈನಲ್‍ಗೇರಿದ್ದರು.

Facebook Comments