ಹೋಮ, ಹವನಗಳು ದೇಶ ಸೇವೆ ಮಾಡಲು ಬಲ ಕೊಡುತ್ತವೆ

ಈ ಸುದ್ದಿಯನ್ನು ಶೇರ್ ಮಾಡಿ

ಪೀಣ್ಯದಾಸರಹಳ್ಳಿ, ಜೂ.24- ಹೋಮ, ಹವನಗಳು ನನಗೆ ದೇಶದ ಸೇವೆ ಮಾಡಲು ಶಕ್ತಿ ಕೊಡುತ್ತವೆ. ಹಗಲು-ರಾತ್ರಿ  ಸೇವೆ ಮಾಡಿ ಮತದಾರರು ತೋರಿಸಿದ ವಿಶ್ವಾಸಕ್ಕೆ ಚ್ಯುತಿ ಬಾರದ ಹಾಗೆ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಹೆಸರಘಟ್ಟ ಮುಖ್ಯರಸ್ತೆಯ ಹಾವನೂರು ಬಡಾವಣೆಯ ವಾಸ್ಕ್ ಯೋಗ ಕೇಂದ್ರದಲ್ಲಿ ಸದಾನಂದಗೌಡರ ಹೆಸರಿನಲ್ಲಿ ಏರ್ಪಡಿಸಿದ್ದ ಗಣಪತಿ ಹೋಮ, ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮದ ಪೂಜೆಯಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ದೇಶದ ಸಂಸ್ಕøತಿ ಒಳ್ಳೆಯದಾಗಿದೆ. ಪರಂಪರೆ, ಒಳ್ಳೆಯ ಆಚಾರ-ವಿಚಾರ ಇರುವ ದೇಶ. ಯೋಗ ಕೇವಲ ವ್ಯಾಯಮವಲ್ಲ, ಇದು ಮನಸ್ಸು ಮತ್ತು ದೇಹ ಕ್ರೋಢೀಕರಿಸಿ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. 180 ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡಿವೆ. ಇದಕ್ಕೆ ಕಾರಣಕತೃ ಪ್ರಧಾನಿ ನರೇಂದ್ರ ಮೋದಿಯವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಬೆಂಗಳೂರು ನಗರ ಜಿಲ್ಲಾಧ್ಯ ಎಸ್.ಮುನಿರಾಜು ಮಾತನಾಡಿ, ಇಲ್ಲಿನ ಆಚಾರ-ವಿಚಾರ, ಸಂಪ್ರದಾಯ ಬೇರೆ ಯಾವ ದೇಶದಲ್ಲೂ ಇಲ್ಲ. ಐದು ವರ್ಷಗಳಿಂದ ದೇಶ ಬದಲಾಗುತ್ತಿದೆ. ಹಾಗೇ ಅಭಿವೃದ್ಧಿಯಾಗುತ್ತಿದೆ. ಅದಕ್ಕೆ ಮೋದಿಯೇ ಕಾರಣ. ನಾವೆಲ್ಲರೂ ಭಾರತೀಯರೆಂದು ಎದೆತಟ್ಟಿ ಹೇಳಬಹುದು ಎಂದರು.

ಕೇವಲ ಅಧಿಕಾರಕ್ಕಾಗಿ ಮಾತ್ರ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆಯೇ ಹೊರತು ಅಭಿವೃದ್ಧಿಗಾಗಿ ಅಲ್ಲ. ಅಭಿವೃದ್ಧಿ ಕೆಲಸ ಮಾಡಿದರೆ ಜನ ನಿಮ್ಮನ್ನು ಮುಂದುವರಿಸುತ್ತಾರೆ. ಇಲ್ಲದಿದ್ದರೆ ನಿಮ್ಮ ವೈಫಲ್ಯಗಳನ್ನು ಸಮಾಜದ ಮುಂದೆ ನಾವು ತರುತ್ತವೆ ಎಂದು ಖ್ಯಾತ ಯೋಗ ಗುರು ಅಧ್ಯಾತ್ಮಿಕ ಚಿಂತಕ ಶ್ರೀ ಉಮಾ ಮಹೇಶ್ವರ ಗುರೂಜಿ ಎಚ್ಚರಿಸಿದರು.

ಬಿಜೆಪಿ ಮುಖಂಡ ಟಿ.ಎಸ್. ಗಂಗರಾಜು, ಪಾಲಿಕೆ ಸದಸ್ಯರಾದ ಉಮಾದೇವಿ ನಾಗರಾಜು, ಎನ್.ಲೋಕೇಶ್, ಕ್ಷೇತ್ರದ ಯುವ ಮೋರ್ಚ ಅಧ್ಯಕ್ಷ ಸತೀಶ್ ಮತ್ತಿತರರಿದ್ದರು.

Facebook Comments