ಯತ್ನಾಳ್‍ಗೆ ಡಿವಿಎಸ್‍ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಗಂಗಾವತಿ, ಅ.5- ಕೇಂದ್ರ ಸರ್ಕಾರದಿಂದ ನೆರೆ ಸಂತ್ರಸ್ತರ ಪರಿಹಾರ ಕೇಳಲು ಅದರದ್ದೇ ಆದ ವ್ಯವಸ್ಥೆ ಇದೆ. ಟೀಕೆಗಳ ಮೂಲಕ ಹಣ ಕೇಳಲು ಆಗುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಕೂಡ ಒಬ್ಬ ಶಾಸಕರು. ರಾಜ್ಯಕ್ಕೆ ತೊಂದರೆಯಾದಾಗ ಕೇಂದ್ರದಿಂದ ಅನುದಾನ ಕೇಳಲು ಅವರೂ ಮುಂದಾಗಬೇಕು. ಬರೀ ಟೀಕೆಗಳನ್ನು ಮಾಡುವುದರಿಂದ ಪ್ರಯೋಜನವಿಲ್ಲ.

ನೀತಿ-ನಿಯಮಾವಳಿಗಳ ಪ್ರಕಾರ ನಾವು ಅನುದಾನ ಪಡೆಯಬೇಕು ಎಂದರು. ಹೇಳಿಕೆಗಳಿಂದ, ಟೀಕೆಗಳಿಂದ ಅನುದಾನ ಬರುವುದಾದರೆ ದೇಶದ ಎಲ್ಲ ಕಡೆಗಳಿಂದ ಬರುತ್ತಿತ್ತು ಎಂದು ಟಾಂಗ್ ನೀಡಿದರು. ನೆರೆ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಾರತಮ್ಯ ಮಾಡಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಅರಿವಿದೆ. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದರು.

Facebook Comments