“ನಾನು ಆರೋಗ್ಯವಾಗಿದ್ದಾನೆ, ಆತಂಕ ಪಡಬೇಡಿ, ವದಂತಿ ಹಬ್ಬಿಸಬೇಡಿ” : ದ್ವಾರಕೀಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.16-ನಿಮ್ಮ ದ್ವಾರಕೀಶ್ ಆರೋಗ್ಯವಾಗಿದ್ದಾನೆ… ಚೆನ್ನಾಗಿದ್ದಾನೆ… ಯಾರೂ ಆತಂಕಪಡಬೇಡಿ. ಹೀಗೆಂದು ಕನ್ನಡ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ವಿಡಿಯೋ ಸಂದೇಶದ ಮೂಲಕ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ತಮ್ಮ ನಿವಾಸದ ಪೂಜಾಕೋಣೆಯಲ್ಲಿಂದು ದೇವರನ್ನು ಪ್ರಾರ್ಥಿಸುತ್ತಿದ್ದ ದ್ವಾರಕೀಶ್ ಅವರು ಆ ಮೂಲಕವೇ ಮಾತು ಆರಂಭಿಸಿ, ಕೆಲವು ಸುಳ್ಳು ವದಂತಿಗಳು ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿವೆ.

ಇದ್ಯಾವುದನ್ನೂ ನಂಬಬೇಡಿ. ರಾಘವೇಂದ್ರಸ್ವಾಮಿಗಳ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ಒಂದು ವೇಳೆ ನನಗೇನಾದರೂ ಆದರೆ ನಿಮಗೆ ವಿಷಯ ತಿಳಿಯಲಿದೆ. ಸದ್ಯಕ್ಕೆ ಹರಿದಾಡುತ್ತಿರುವ ವದಂತಿಗಳನ್ನು ನಂಬಿ ಗೊಂದಲಕ್ಕೊಳಗಾಗಬೇಡಿ ಎಂದು ಖುದ್ದಾಗಿ ಮನವಿ ಮಾಡಿದ್ದಾರೆ.

ಕೆಲ ಕಿಡಿಗೇಡಿಗಳು ಇಂದು ಬೆಳಗ್ಗೆ ವಾಟ್ಸಾಪ್‍ನಲ್ಲಿ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಿಯಬಿಟ್ಟಿದ್ದರು. ಅದು ವ್ಯಾಪಕವಾಗಿ ಹಬ್ಬಿಸಿದ್ದಲ್ಲದೆ, ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.

ಪತ್ರಕರ್ತರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ದ್ವಾರಕೀಶ್ ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ವಿಚಾರಣೆ ಆರಂಭಿಸಿದ್ದರು. ನಿರಂತರವಾಗಿ ಕೇಳಿ ಬಂದ ವಿಚಾರಣೆಗಳಿಗೆ ಉತ್ತರ ನೀಡಲಾಗದೆ ಬೇಸತ್ತ ದ್ವಾರಕೀಶ್ ಅವರು ಅಂತಿಮವಾಗಿ ವಿಡಿಯೋ ಸಂದೇಶದ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin