ಭಾರತದ ಮಾರುಕಟ್ಟೆಗೆ ಬಂತು ಹೈ ಟೆಕ್ ಇ ಸೈಕಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18- ಜಪಾನಿನ ಯಮಹಾ ಮೋಟಾರ್ ಕಂಪೆನಿ ಪಾಲುದಾರಿಕೆಯೊಂದಿಗೆ ಭಾರತದ ಪ್ರತಿಷ್ಟಿತ ಸೈಕಲ್ ತಯಾರಿಕೆಯ ಹೀರೋ ಈಗ ಭಾರತದಲ್ಲಿ ಮೊಟ್ಟ ಮೊದಲ ಇ-ಸೈಕಲ್‍ನ್ನು (ಬ್ಯಾಟರಿ ಚಾಲಿತ) ಪರಿಚಯಿಸಿದೆ. ನಗರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಇ-ಸೈಕಲ್ ಸಾಹಸಿಗಳು ಅದನ್ನು ಪರಿಚಯಿಸುವ ಮೂಲಕ ಸಮಾರಂಭಕ್ಕೆ ಮತ್ತಷ್ಟು ಹುರುಪು ತುಂಬಿದರು.

ಹೀರೋದ ಈ ಎಲೆಕ್ಟ್ರಿಕಲ್ ಸೈಕಲ್‍ಗೆ ಲೆಟ್ರೋ ಇ ಎಚ್‍ಎಕ್ಸ್ 20 ಎಂದು ಹೆಸರಿಡಲಾಗಿದ್ದು , ಪರಿಸರದ ಮೇಲೆ ಆಗುತ್ತಿರುವ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚುತ್ತಿರುವ ಸೌರ ಹಾಗೂ ಬ್ಯಾಟರಿ ಚಾಲಿತ ಉತ್ಪನ್ನಗಳ ಸಾಲಿನಲ್ಲಿ ಈಗ ನಾವು ಹೊಸ ಆವಿಷ್ಕಾರದ ಸೈಕಲ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮಾರುಕಟ್ಟೆ ವಿಭಾಗದ ನಿರ್ದೇಶಕ ಎಕ್ಸಿ ತಿಳಿಸಿದರು. 3.5 ಗಂಟೆ ತಗಲುವ ಪುಲ್ ಚಾರ್ಜಿಂಗ್‍ನಲ್ಲಿ ಸುಮಾರು 70 ಕಿ.ಮೀ ಚಲಿಸುವ ಸಾಮಥ್ರ್ಯ ಇದೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin