ಎಂಎಲ್ಎಗಳ ಹೆಸರಿನಲ್ಲಿ ಇ-ಮೇಲ್ ಖಾತೆ ಓಪನ್ , ನಿಮ್ಮ ಕ್ಷೇತ್ರದ ಐಡಿ ನೋಡಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

E-mail--01

ಬೆಂಗಳೂರು, ಜೂ.29-ವಿಧಾನಸಭೆ ಸಚಿವಾಲಯ ಆಯಾ ಶಾಸಕರ ಕ್ಷೇತ್ರದ ಹೆಸರಿನಲ್ಲಿ ಇ-ಮೇಲ್ ಖಾತೆಯನ್ನು ತೆರೆದಿದೆ. ವಿಧಾನಸಭೆಗೆ ಸಂಬಂಧಿಸಿದ ಮಾಹಿತಿಗಳನ್ನು ಶೀಘ್ರವಾಗಿ ಶಾಸಕರಿಗೆ ತಲುಪಿಸಲು ಹಾಗೂ ಅಂತರ್ಜಾಲದ ಮೂಲಕ ನಿವಾರಿಸಲು ಅನುಕೂಲವಾಗುವಂತೆ ಆಯಾ ವಿಧಾನಸಭಾ ಕ್ಷೇತ್ರದ ಹೆಸರಿನಲ್ಲಿ ಇ-ಮೇಲ್ ಖಾತೆಯನ್ನು ತೆರೆಯಲಾಗಿದೆ.

ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರ ಹಾಗೂ ನಾಮನಿರ್ದೇಶಿತ ಶಾಸಕರ ಹೆಸರಿನಲ್ಲಿ ತಲಾ ಒಂದೊಂದು ಇ-ಮೇಲ್ ಖಾತೆಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಇ-ಮೇಲ್ ಖಾತೆ ಬಳಸುವ ಶಾಸಕರು ವಿಧಾನಸಭೆ ಸಚಿವಾಲಯದ ಗಣಕಕೇಂದ್ರದಿಂದ ಪಾಸ್‍ವರ್ಡ್‍ಗಳನ್ನು ಪಡೆದು ಅದರ ಗೌಪ್ಯತೆಯನ್ನು ಕಾಪಾಡುವಂತೆ ಕೋರಲಾಗಿದೆ. ಶಾಸಕರ ಸದಸ್ಯತ್ವ ಅವಧಿ ಮುಕ್ತಾಯಗೊಂಡ 15ದೊಳಗೆ ಇ-ಮೇಲ್‍ನಲ್ಲಿರುವ ಮಾಹಿತಿಗಳನ್ನು ತೆಗೆದುಕೊಳ್ಳಬೇಕೆಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

bulletin_07_2018-001

bulletin_07_2018-002 bulletin_07_2018-003 bulletin_07_2018-004 bulletin_07_2018-005 bulletin_07_2018-006 bulletin_07_2018-007

 

Facebook Comments

Sri Raghav

Admin