ಮಹಾರಾಷ್ಟ್ರದದಲ್ಲಿ 2 ಕಡೆ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

ಮಹಾರಾಷ್ಟ್ರ, ಸೆ.5- ಮಹಾರಾಷ್ಟ್ರದ ಪಾಲ್‍ಘರ್ ಜಿಲ್ಲೆಯಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ.  ನಿನ್ನೆ ತಡರಾತ್ರಿ ಸುಮಾರು ಅರ್ಧ ಗಂಟೆ ಅಂತರದಲ್ಲಿ ಎರಡು ಭೂಕಂಪಗಳು ದಾಖಲಾಗಿವೆ. ರಾತ್ರಿ 11.41ರಲ್ಲಿ ದಹನು ತಹಸಿಲ್‍ನಲ್ಲಿ ಭೂಕಂಪವಾಗಿದ್ದು, ಕಂಪನದ ತೀವ್ರತೆ 4.0ರಷ್ಟು ದಾಖಲಾಗಿದೆ.

ನಂತರ ಮಧ್ಯರಾತ್ರಿ 12.05ಕ್ಕೆ ತಲರಾಸ್ ತಹಸಿಲ್‍ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 3.6ರಷ್ಟು ದಾಖಲಾಗಿದೆ ಎಂದು ಪಾಲ್‍ಘರ್ ಜಿಲ್ಲಾ ವಿಪತ್ತು ನಿಯಂತ್ರಣ ಕೋಶದ ಮುಖ್ಯಸ್ಥ ವಿವೇಕಾನಂದ ಕಡಂಬ್ ತಿಳಿಸಿದ್ದಾರೆ.

ಈ ಎರಡೂ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ.  ಭೂಮಿ ಕಂಪಿಸಿದ್ದರಿಂದ ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದು ಕೆಲ ಸಮಯದವರೆಗೆ ಮನೆಯ ಹೊರಗಡೆಯೇ ಉಳಿದಿದ್ದಾರೆ.

Facebook Comments