ಇಂಡೋನೇಷ್ಯಾದಲ್ಲಿ ಪ್ರಭಲ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

ಜಕಾರ್ತ,ಡಿ.14- ಪೂರ್ವ ಇಂಡೋನೇಷ್ಯಾದಲ್ಲಿ ಇಂದು 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅಪಾಯಕಾರಿ ಸುನಾಮಿ ಅಲೆಗಳೇಳುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ ಎಂದು ಅಮೆರಿಕ ಭೂ ಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆ( ಯುಎಸ್‍ಜಿಎಸ್) ತಿಳಿಸಿದೆ.

ಮೌಮೆರೆ ಪಟ್ಟಣದ ಉತ್ತರಕ್ಕೆ ಸುಮಾರು 100 ಕಿ.ಮೀ.ಗಳಷ್ಟು ದೂರದಲ್ಲಿ ಫ್ಲೋರೆಸ್ ಸಮುದ್ರದಲ್ಲಿ 18.5 ಕಿ.ಮೀ.(11 ಮೈಲಿಗಳು)ಗಳಷ್ಟು ಆಳದಲ್ಲಿ ಗ್ರೀನ್‍ವಿಚ್ ಕಾಲಮಾನ 03:20ರಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್‍ಜಿಎಸ್ ಹೇಳಿದೆ. ಭೂಕಂಪದ ಕೇಂದ್ರಬಿಂದುವಿನ 1000 ಕಿ.ಮೀ(600 ಮೈಲು)ಗಳ ವ್ಯಾಪ್ತಿಯ ಕರಾವಳಿಗಳಲ್ಲಿ ಭಾರೀ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಫೆಸಿಫಿಕ್ ಸುನಾಮಿ ಮುನ್ಸೂಚನಾ ಕೇಂದ್ರ ಎಚ್ಚರಿಕೆ ನೀಡಿದೆ.

ಸಾವುನೋವಿನ ಸಾಧ್ಯತೆ ಕಡಿಮೆ. ಏಕೆಂದರೆ ಈ ಪ್ರದೇಶದ ಇತ್ತೀಚಿನ ಭೂಕಂಪಗಳು ಸುನಾಮಿಯಂತಹ ಇತ್ತೀಚಿನ ಮತ್ತು ಭೂ ಕುಸಿತಗಳಂತಹ ದ್ವೀತೀಯಕ ಅಪಾಯಗಳನ್ನುಂಟು ಮಾಡಿದ್ದು ಇವುಗಳಿಂದಲೇ ಹೆಚ್ಚಿನ ನಷ್ಟವಾಗಿರುವಂತಿದೆ ಎಂದು ಯುಎಸ್‍ಜಿಎಸ್ ಪ್ರತಿಪಾದಿಸಿದೆ.

ಇಂಡೋನೇಷ್ಯಾ ಪೆಸಿಫಿಕ್ ಅಗ್ನಿವರ್ತುಲ ದಲ್ಲಿರುವುದರಿಂದ ಫೆಸಿಫಿಕ್ ಜಲಾನಯನ ಪ್ರದೇಶದಾದ್ಯಂತ ಮತ್ತು ಆಗ್ನೇಯ ಏಷ್ಯಾ ಮುಖಾಂತರ ಜಪಾನಿನಿಂದ ಟೆಕಾನಿಕ್ ಶಿಲಾ ಪದರಗಳು ಘರ್ಷಿಸಿ ತೀವ್ರ ಭೂಕಂಪದಂತಹ ವಿದ್ಯಮಾನಗಳು ಘಟಿಸುತ್ತವೆ. ಈ ಕಾರಣದಿಂದ ಇಂಡೋನೇಷ್ಯಾದಲ್ಲಿ ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ(ಅಗ್ನಿಪರ್ವತ) ಸೋಟಗಳ ಅನುಭವ ಆಗುತ್ತಿರುತ್ತದೆ.

2004ರಲ್ಲಿ ಸಂಭವಿಸಿದ 9.1 ತೀವ್ರತೆಯ ಭಾರೀ ಭೂಕಂಪದಿಂದ ಎದ್ದ ದೈತ್ಯ ಸುನಾಮಿ ಅಲೆಗಳು ಇಂಡೊನೇಷ್ಯಾದ 1,70000 ಜನರೂ ಸೇರಿದಂತೆ 2,20,000 ಜನರನ್ನು ಆಹುತಿ ತೆಗೆದುಕೊಂಡಿದ್ದವು. ಈ ಬಾಕ್ಸಿಂಗ್‍ಡೇ ದುರಂತವು ಇತಿಹಾಸದ ಅತಿ ಭೀಕರ ನೈಸರ್ಗಿಕ ವಿಪತ್ತುಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.

2018ರಲ್ಲಿ ಲಾಂಬೋಕ್ ದ್ವೀಪವನ್ನು ನಡುಗಿಸಿದ ಪ್ರಬಲ ಭೂಕಂಪ ಮತ್ತು ಅದರ ಬಳಿಕದ ಎರಡು ವಾರಗಳ ಕಾಲ ಉಂಟಾದ ಮರುಕಂಪನಗಳು ಹಾಲಿಡೇ ಐಲ್ಯಾಂಡ್ ಮತ್ತು ನೆರೆಯ ಸುಂಬಾವಾದಲ್ಲಿ 550ಕ್ಕೂ ಅಕ ಜನರ ಸಾವಿಗೆ ಕಾರಣವಾದವು.

ಕಳೆದ ವರ್ಷ, ಸುಲಾವೇಸಿ, ದ್ವೀಪದ ಪಾಲುವಿನಲ್ಲಿ ಉಂಟಾದ 7.5 ತೀವ್ರತೆಯ ಭೂಕಂಪದಲ್ಲಿ 4300ಕ್ಕೂ ಅಕ ಜನರು ಸಾವಿಗೀಡಾದರು ಇಲ್ಲವೇ ಕಣ್ಮರೆಯಾದರು.

Facebook Comments