ಒಡಿಸ್ಸಾದಲ್ಲಿ ಲಘು ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್,ಏ.20- ಮಂದಿರಗಳ ನಾಡೆಂದೇ ಪ್ರಸಿದ್ಧಿ ಹೊಂದಿರುವ ಒಡಿಸ್ಸಾದ ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಉಂಟಾಗಿದೆ.
ಭೂಕಂಪನವು ಇಂದು ಬೆಳಗ್ಗೆ 6.20 ರಲ್ಲಿ ಸಂಭಿವಿಸಿದ್ದು ಕಂಪನದ ಸಾಂದ್ರತೆ ಇ 4.4ರಷ್ಟಿದ್ದಾರೂ ಯಾವುದೇ ಸಾವು, ನೋವು ಉಂಟಾಗಿಲ್ಲ ಎಂದು ತಿಳಿದು ಬಂದಿದೆತ.

ಭೂಕಂಪನದ ಪರಿಣಾಮಗಳು ಹೆಚ್ಚಾಗಿ ಮಯೂರ್ಭಂಜ್ ಹಾಗೂ ಜಾಖಂಡ್ ಜಿಲ್ಲೆಗಳಲ್ಲಿ ಹೆಚ್ಚಾಗಿ ಉಂಟಾಗಿದ್ದು, ರೈರಾಂಗ್ಪುರ್, ಬಿಸಾಯ್ಕಿ, ಗೊರುಮಾಹಿಸನಿ ಮತ್ತು ಬಹಾಲಾಡ ಪ್ರದೇಶಗಳಲ್ಲಿ ಕಂಪನದ ಪರಿಣಾಮ ಹೆಚ್ಚಾಗಿ ಕಾಣಿಸಿಕೊಂಡಿದ್ದು , ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಭೂಕಂಪನದ ಅನುಭವಗಳು ಖರ್ಸವನ್, ನರೀಕೆಲಾ,ಘತ್ಕಿಲಾ,ದುಮಾರಿಯಾ ಮತ್ತುಗುರುಬಂದ ಪ್ರದೇಶಗಳಲ್ಲೂ ಉಂಟಾಗಿದೆ. ಒಡಿಸ್ಸಾವು ಬೆಟ್ಟ ಗುಡ್ಡಗಳ ನಾಡೆಂದು ಗುರುತಿಸಿಕೊಂಡಿದ್ದು ಆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಾಗಾಗ್ಗೆ ಭೂಕಂಪನಗಳು ಸಂಭವಿಸುತ್ತಲೇ ಇರುತ್ತದೆ.

2015ರಲ್ಲಿ ಒಡಿಸ್ಸಾದ ಭುವನೇಶ್ವರದ 34 ಗ್ರಾಮಗಳಲ್ಲಿ ಭೂಕಂಪನ ಉಂಟಾಗಿ ಒಬ್ಬರು ಸತ್ತು, 200 ಮಂದಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ