ತಮಿಳುನಾಡಿನಲ್ಲಿ ಲಘು ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ನ.29- ತಮಿಳುನಾಡಿನ ಉತ್ತರ ಭಾಗದಲ್ಲಿರುವ ವೆಲ್ಲೂರ್ ಪಟ್ಟಣದಲ್ಲಿ ಇಂದು ನಸುಕಿನ ಜವ ಲಘು ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಆಫ್ ಸಿಸ್ಮಾಲಜಿ ತಿಳಿಸಿದೆ.

ರಿಕ್ಟರ್ ಮಾಪಕದಲ್ಲಿ 3.6 ತೀವ್ರ ದಾಖಲಾದ ಭೂಕಂಪ ಇಂದು ನಸುಕಿನ ಜಾವ ಭಾರತೀಯ ಕಾಲಮಾನ 04:17:22ರಲ್ಲಿ ಘಟಿಸಿದೆ ಎಂದು ಎನ್‍ಸಿಎಸ್ ಹೇಳಿದೆ.

25 ಕಿ.ಮೀಗಳಷ್ಟು ಆಳದ ಭೂಕಂಪ ಇದಗಿದ್ದು, ವೆಲ್ಲೂರ್‍ನಿಂದ 59 ಕಿ.ಮೀಗಳಷ್ಟು ಆಚೆಗೆ ಮತ್ತು ಚೆನ್ನೈನಿಂದ ಪಶ್ಚಿಮಕ್ಕೆ 184 ಕಿ.ಮೀಗಳಷ್ಟು ದೂರದಲ್ಲಿ ಕಂಪನ ಉಂಟಾಗಿದೆ ಎಂದು ಭೂ ವಿಜ್ಞಾನಗಳು ಸಚಿವಾಲಯದ ಅಡಿಯಲ್ಲಿ ಬರುವ ಎನ್‍ಸಿಎಸ್ ಮಾಹಿತಿ ನೀಡಿದೆ.

Facebook Comments

Sri Raghav

Admin