ಮಿಜೋರಾಂನಲ್ಲಿ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

ಮಿಜೋರಾಂ,ನ.26- ಈಶಾನ್ಯ ರಾಜ್ಯದ ಮಿಜೋರಾಂನ ಥೇನ್ಮಾಲ್‍ನಲ್ಲಿ ಮುಂಜಾನೆ 5 ಗಂಟೆ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದಾಗಿ ಪಶ್ಚಿಮಬಂಗಾಳ ಹಾಗೂ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲೂ ಇದರ ಅನುಭವವಾಗಿದೆ.

ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಥೇನ್ಮಾಲ್‍ನಿಂದ 73 ಕಿ.ಮೀ. ದೂರದ ಪ್ರದೇಶದಲ್ಲಿ 93 ಅಡಿ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಜನವಸತಿ ಪ್ರದೇಶಗಳು ಈ ಭಾಗದಲ್ಲಿ ಇಲ್ಲದಿದ್ದುದ್ದರಿಂದ ಜೀವಹಾನಿಗಳು ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದಲ್ಲಿ ಜನರು ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

Facebook Comments